4:46 PM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಖಾಕಿ ದಂಡು, ಬೂಟುಗಾಲಿನ ಸದ್ದು: ಮುಗಿಲು ಮುಟ್ಟಿದ ಕೈ- ಕೇಸರಿ ಜೈಕಾರ: ಮತ ಎಣಿಕೆ ಕೊನೆಗೂ ಸುಖಾಂತ್ಯ

13/05/2023, 20:38

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
ಅಭಿನಯ ಪ್ರವೀಣ್ ಮಂಗಳೂರು

info.reporterkarnataka@gmail.com
ಅಲ್ಲಿಲ್ಲಿ ಬ್ಯಾರಿಕೇಡ್, ಖಾಕಿ ದಂಡು, ಆರೆಸೇನೆ ಪಡೆಯ ಸರ್ಪಗಾವಲು, ಇದರೊಂದಿಗೆ ಆಗಾಗ ಮುಗಿಲು ಮುಟ್ಟುತ್ತಿದ್ದ ಜಯಕಾರದ ಘೋಷಣೆ.





ಇದು ಸುರತ್ಕಲ್ ಎನ್ ಐಟಿಕೆಯಲ್ಲಿ ಇಂದು ಬೆಳಗ್ಗಿನಿಂದ ಮಟ ಮಟ ಮಧ್ಯಾಹ್ನದವರೆಗೆ ಕಂಡು ಬಂದ ದೃಶ್ಯ.
ಜಿಲ್ಲೆಯ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಆರಂಭದಿಂದಲೇ ಬಿಜೆಪಿ ಮುನ್ನಡೆ ಸಾಧಿಸಿರುವುದರಿಂದ ಎನ್ ಐಟಿಕೆ ಮತ ಎಣಿಕೆ ಕೇಂದ್ರ ಕಡೆ ಸಾಗುವ ಪ್ರಮುಖ ಪ್ರವೇಶ ದ್ವಾರದಲ್ಲಿ ಬಿಜೆಪಿ ಕಾರ್ಯಕರ್ತರದ್ದೇ ಪಾರಮ್ಯ ಜಾಸ್ತಿಯಾಗಿತ್ತು. ಮಂಗಳೂರು ಮತ್ತು ಪುತ್ತೂರು ಕ್ಷೇತ್ರಗಳು ಮಾತ್ರ ಕಾಂಗ್ರೆಸ್ ಪಾಲಿಗೆ ಆಶಾಕಿರಣವಾಗಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಕಾರ್ಯಕರ್ತರ ಸಂಖ್ಯೆ ಕಡಿಮೆ ಇತ್ತು. ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ, ಮೂಡುಬಿದ್ರೆ ಹಾಗೂ ಬೆಳ್ತಂಗಡಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಮುನ್ನಡೆ ಘೋಷಣೆ ಮಾಡಿದಾಗಲೆಲ್ಲ ಬಿಜೆಪಿ ಕಾರ್ಯಕರ್ತರ ಘೋಷಣೆ, ಜಯಕಾರ ಮುಗಿಲು ಮುಟ್ಟುತ್ತಿತ್ತು. ಮಂಗಳೂರು ಮತ್ತು ಪುತ್ತೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮುನ್ನಡೆ ಘೋಷಣೆ ಮಾಡಿದಾಗ ಸಣ್ಣ ಪ್ರಮಾಣದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರ ಘೋಷಣೆ ಕೇಳಿಬರುತ್ತಿತ್ತು. ಮತ ಎಣಿಕೆ ಆರಂಭವಾದಾಗ ಯಾವುದೇ ಟೆನ್ಶನ್ ಇಲ್ಲದೆ ಮಕ್ಕಳ ಜತೆ ಕ್ರಿಕೆಟ್ ಆಟವಾಡುತ್ತಿದ್ದ ಮಂಗಳೂರು ಶಾಸಕ ಯು.ಟಿ. ಖಾದರ್ ಅವರು ತನ್ನ ಮುನ್ನಡೆಯ ಅಂತರ 10 ಸಾವಿರ ದಾಟುತ್ತಿದ್ದಂತೆ ಕೌಟಿಂಗ್ ಸೆಂಟರ್ ಗೆ ಭೇಟಿ ನೀಡಿದರು. ಖಾದರ್ ಜತೆ ಅವರ ಬೆಂಬಲಿಗರೂ ಆಗಮಿಸಿದರು. ನಂತರ ಕಾಂಗ್ರೆಸ್ ಕಾರ್ಯಕರ್ತರ ತಂಡಕ್ಕೆ ಹೊಸ ಹುರುಪು ಬಂತು. ಇದಾದ ನಂತರ ಮೂಡುಬಿದರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್, ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್, ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್,‌
ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ, ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಎಂಟ್ರಿ ಕೊಟ್ರು. ಈ ಸಂದರ್ಭದಲ್ಲೆಲ್ಲ ಬಿಜೆಪಿ ಕಾರ್ಯಕರ್ತರು ಜೈಕಾರ ಕೂಗುತ್ತಿದ್ದರು. ಒಂದು ಸಂದರ್ಭದಲ್ಲಿ ಪರಸ್ಪರ ನಿಂದಿಸುವ ಘೋಷಣೆ ಕೂಡ ಉಭಯ ಪಕ್ಷಗಳ ನಡುವೆ ವಿನಿಮಯವಾಯಿತು. ಇನ್ನೇನು ಹೊಡೆದಾಟ ನಡೆಯುತ್ತದೆ ಎನ್ನುವಷ್ಟರಲ್ಲಿ ಖಾಕಿ ಪಡೆ ಅರೆಸೇನಾ ಪಡೆಯೊಂದಿಗೆ ಪ್ರವೇಶ ಮಾಡಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ತಡೆಗೋಡೆ ನಿರ್ಮಿಸಿದರು. ಬಿಜೆಪಿ ಅಭ್ಯರ್ಥಿಗಳ ಪ್ರವೇಶವಾದ ಬಳಿಕ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ತಂಡ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಮಾಡಿತು. ನಂತರ ಮತ ಎಣಿಕೆ ಕೇಂದ್ರದಿಂದ ಖಾದರ್ ಹೊರಗೆ ಬಂದರು. ಬಳಿಕ ವೇದವ್ಯಾಸ ಕಾಮತ್ ನಿರ್ಗಮಿಸಿದರು. ಇದಾದ ನಂತರ ಹರೀಶ್ ಪೂಂಜ ಬಂದ್ರು. ಕಾಂಗ್ರೆಸ್ ನ ಅಶೋಕ್ ಕುಮಾರ್ ರೈ ಅವರು ಹೊರಬರುತ್ತಿದ್ದಂತೆ ಕಾದು ಕುಳಿತ್ತಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಬೈಟ್ಸ್ ನೀಡಲಾರಂಭಿಸಿದರು. ಅನತಿ ದೂರದಲ್ಲಿ ಅವರಿಗೆ ಮುಖಮಾಡಿ ಕಾಂಗ್ರೆಸ್ ಕಾರ್ಯಕರ್ತರ ತಂಡ ಕೈಯಲ್ಲಿ ಹೂವಿನ ಹಾರ ಹಿಡಿದುಕೊಂಡು ಜಯಕಾರ ಹಾಕುತ್ತಾ ನಿಂತಿತ್ತು. ಅಷ್ಟರಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್ ಅವರ ತಂಡ ಮತ ಎಣಿಕೆ ಕೇಂದ್ರದಿಂದ ಹೊರಬಂತು. ಅಶೋಕ್ ಕುಮಾರ್ ರೈ ಅವರು ತನ್ನ ತಂಡದೊಂದಿಗೆ ಮಾಧ್ಯಮಕ್ಕೆ ಬೈಟ್ಸ್ ನೀಡುತ್ತಿದ್ದರಿಂದ ಉಮಾನಾಥ ಕೋಟ್ಯಾನ್ ಅವರ ತಂಡ ಬದಿಯಲ್ಲಿ ಜಾಗಮಾಡುತ್ತಾ ಬಂತು. ಈ ಸಂದರ್ಭದಲ್ಲಿ
ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ತಂಡ ಪರಸ್ಪರ ಮುಖಾಮುಖಿಯಾದರೂ ಉಭಯ ಕಡೆಯವರು ಯಾವುದೇ ಘೋಷಣೆಗಳನ್ನು ಕೂಗದೆ ನಗುಮುಖದಲ್ಲೇ ಪರಸ್ಪರ ಬೀಳ್ಕೊಟ್ಟರು. ನಂತರ ರಾಜೇಶ್ ನಾಯ್ಕ್ ಅವರ ತಂಡ ಹೊರ ಬರುವಾಗಲೂ ಇಂತಹದ್ದೇ ಸನ್ನಿವೇಶ ಎದುರಾಯಿತು. ಕೊನೆಗೂ ಮತ ಎಣಿಕೆ ಶಾಂತಿಯುತವಾಗಿ ಕೊನೆಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು