5:30 AM Friday7 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ವೀಕೆಂಡ್ ವಿತ್ ರಮೇಶ್: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾರ ಸಿನಿ ಜರ್ನಿ, ಬಾಲ್ಯ, ರಾಜಕೀಯ ಯಾನದ ಅನಾವರಣ

26/03/2023, 23:13

ಬೆಂಗಳೂರು(reporterkarnataka.com):ಅದೊಂದು ಸಂಭ್ರಮದ ಕ್ಷಣ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಸಾಧಕರ ಕುರ್ಚಿಯಲ್ಲಿ ಕುಳಿತ್ತಿದ್ದರು. ಕನ್ನಡತಿಯ ಸಿನಿ ಜರ್ನಿ, ರಾಜಕೀಯ ಪಯಣ, ಬಾಲ್ಯ, ಶಿಕ್ಷಣ ಎಲ್ಲೂ ಇಲ್ಲಿ ಬಿಚ್ಚಿಕೊಳ್ಳುತ್ತದೆ. ಸಂತೋಷ, ಸಂಭ್ರಮ, ದುಃಖ ಎಲ್ಲದರ ಅನಾವರಣ.
ಇದು ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೊದಲ ಎಪಿಸೋಡ್​ ನ ಕಥೆ. ಸೀಸನ್ 5ರಲ್ಲಿ ಮೊದಲ ಸಾಧಕಿಯಾಗಿ ತೆರೆಯ ಮುಂದೆ ನಟಿ, ರಾಜಕಾರಣಿ ರಮ್ಯಾ ಸಾಧಕರ ಕುರ್ಚಿ ಅಲಂಕರಿಸಿದ್ದಾರೆ.
ಕನ್ನಡ ಚಿತ್ರರಂಗದ ರಾಣಿ ಜೇನು ಎಂದೇ ಖ್ಯಾತರಾದ ರಮ್ಯಾ ಅವರ ಬಾಲ್ಯ, ಶಾಲೆ, ಗೆಳೆಯರ ಬಗ್ಗೆ ಹಲವು ವಿಷಯಗಳನ್ನು ಶೋ ನಲ್ಲಿ ತೋರಿಸಲಾಗುತ್ತದೆ. ರಮ್ಯಾರ ಸಿನಿ ಪಯಣದ ಬಗ್ಗೆಯೂ ಬೆಳಕು ಚೆಲ್ಲಲಾಗುತ್ತದೆ. ರಮ್ಯಾ ನಟಿಸಿದ ಸೂಪರ್ ಡುಪರ್ ಹಿಟ್ ಸಿನಿಮಾ ಸಂಜು ವೆಡ್ಸ್ ಗೀತಾ ಬಗೆಗಿನ ಕೆಲ ಅಪರೂಪದ ಮಾಹಿತಿಯನ್ನು
ಶೋನಲ್ಲಿ ಪ್ರೇಕ್ಷಕರ ಮುಂದೆ ಬರುತ್ತದೆ.
ವೀಕೆಂಡ್ ವಿತ್ ರಮೇಶ್ ಶೋನಲ್ಲಿ ರಮ್ಯಾ ಅವರ ಮೊದಲ ಸಿನಿಮಾ ಅಭಿ, ಎರಡನೇ ಹಿಟ್ ಸಿನಿಮಾ ಎಕ್ಸ್​ಕ್ಯೂಸ್ ​ಮಿ ಬಳಿಕ ಸಂಜು ವೆಡ್ಸ್ ಗೀತಾ ಹೀಗೆ ರಮ್ಯಾ ಅವರ ಸಿನಿ ಜರ್ನಿಯನ್ನು ಅನಾವರಣಗೊಳಿಸಲಾಗುತ್ತದೆ. ಸಂಜು ವೆಡ್ಸ್ ಗೀತಾ ಸಿನಿಮಾದ ನಿರ್ದೇಶಕ ನಾಗಶೇಖರ್ ಅವರ ವಿಡಿಯೊ ತೆರೆಯ ಮೇಲೆ ಬರುತ್ತಾರೆ. ನಾಗಶೇಖರ್ ಮಾತು ಮುಗಿದ ತಕ್ಷಣ ಸಂಜು ವೆಡ್ಸ್ ಗೀತಾ ಸಿನಿಮಾದ ನಾಯಕ ಶ್ರೀನಗರ ಕಿಟ್ಟಿ ವೀಕೆಂಡ್ ವೇದಿಕೆಯಲ್ಲಿ ಕಾಣಿಸಿಕೊಂಡರು. ಸಾಧಕರ ಕುರ್ಚಿಯಲ್ಲಿದ್ದ ರಮ್ಯಾಗೆ ಶಾಕ್. ಮರುಕ್ಷಣವೇ ಎಲ್ಲಿಲ್ಲದ ಖುಷಿ, ಪ್ರೇಕ್ಷಕರಲ್ಲಿ ಸಂಭ್ರಮವೇ ಸಂಭ್ರಮ.
ಹಣ ಖಾಲಿಯಾಗಿ ಸಂಜು ವೆಡ್ಸ್ ಗೀತಾ ಸಿನಿಮಾ ನಿಂತು ಹೋಗಿದ್ದು. ಆಗ ರಮ್ಯಾ ತಮ್ಮ ಹಣ ಹಾಕಿ ಸಿನಿಮಾದ ಚಿತ್ರೀಕರಣ ಮುಗಿಯುವಂತೆ ಮಾಡಿದ್ದನ್ನು ನಾಗಶೇಖರ್ ನೆನಪಿಸಿಕೊಂಡರು.
ಸಿನಿಮಾ ಸೂಪರ್ ಹಿಟ್ ಆಗಿ ನನಗೆ ಒಂದು ನೆಲೆ ಕೊಟ್ಟಿತು. ನನ್ನ ಮನೆಯಲ್ಲಿ ನಾನು ದೇವರ ಜೊತೆಗೆ ವಸ್ತುವೊಂದನ್ನಿಟ್ಟು ಪೂಜಿಸುತ್ತೇನೆ ಅದನ್ನು ರಮ್ಯಾಗೆ ಉಡುಗೊರೆಯಾಗಿ ತಂದಿದ್ದೇನೆ ಎಂದು ರಮ್ಯಾಗೆ ಉಡುಗೊರೆ ಕೊಟ್ಟರು. ಉಡುಗೊರೆಯನ್ನು ಬಿಚ್ಚಿ ನೋಡಿದ ರಮ್ಯಾಗೆ ಶಾಕ್. ಅದು ಸಂಜು ವೆಡ್ಸ್ ಗೀತಾ ಸಿನಿಮಾದ ಕ್ಲಾಪ್ ಆಗಿತ್ತು. ಅದನ್ನು ತಾನೇ ಇಟ್ಟುಕೊಳ್ಳುವುದಾಗಿ ರಮ್ಯಾ ಹೇಳಿದರು.
ಊಟಿ ಮಳೆಯಲ್ಲಿ ಶೂಟಿಂಗ್ ವೇಳೆ ಯಾರ ಬಳಿಯೂ ಜಾಕೆಟ್, ಬೂಟ್ ಇಲ್ಲದ್ದನ್ನು ಕಂಡು ರಮ್ಯಾ ಎಲ್ಲರಿಗೂ ಜಾಕೆಟ್, ಬೂಟ್​ಗಳನ್ನು ತಂದಿದ್ದನ್ನು ಸಹ ಇದೇ ಸಮಯದಲ್ಲಿ ನೆನಪಿಸಿಕೊಂಡರು. ಅಲ್ಲದೆ, ಸಂಜು ವೆಡ್ಸ್ ಸಿನಿಮಾದ ಕತೆಯನ್ನು ರಮ್ಯಾರ ತಂದೆ ಮೊದಲು ಕೇಳಿ ಶುಭ ಹಾರೈಸಿದ್ದಲ್ಲದೆ, ಸಿನಿಮಾವನ್ನು ಮೊದಲು ನೋಡಿದ್ದು ಸಹ ಅವರೇ ಎಂಬುದನ್ನು ನಾಗಶೇಖರ್ ಹೇಳಿದರು.
ನಟ ಶ್ರೀನಗರ ಕಿಟ್ಟಿ ಸಹ ರಮ್ಯಾರ ಸ್ನೇಹವನ್ನು ನೆನಪಿಸಿಕೊಂಡರು. ರಮ್ಯಾ ಹಾಗೂ ಕಿಟ್ಟಿ ಸೇರಿ ಸಂಜು ವೆಡ್ಸ್ ಗೀತಾ ಸಿನಿಮಾದ ದೃಶ್ಯವೊಂದಕ್ಕೆ ವೇದಿಕೆ ಮೇಲೆ ಹೆಜ್ಜೆ ಹಾಕಿದರು.
ರಮ್ಯಾ ಅವರು ಸಂಜು ವೆಡ್ಸ್ ಗೀತಾ ಸಿನಿಮಾ ಚಿತ್ರೀಕರಣದ ನೆನಪು ಮಾಡಿಕೊಂಡರು. ಶರಣ್ ಕಾಮಿಡಿ ಬಗ್ಗೆ ಹೇಳಿದರು. ಅದೊಂದು ಬಹಳ ಫನ್ ಆದ ಚಿತ್ರೀಕರಣ ಎಂದು ಖುಷಿಪಟ್ಟರು.
ರಮ್ಯಾ ಅವರು ಸಿನಿಮಾಕ್ಕೆ ಆಯ್ಕೆ ಆಗಿದ್ದು ಹೇಗೆ ಎಂಬುದನ್ನು ಹೇಳಿದರು. ರಾಘವೇಂದ್ರ ರಾಜ್ ಕುಮಾರ್ ಅವರು ರಮ್ಯಾ ಅವರಿಗೆ ಸಿನಿಮಾದಲ್ಲಿ ನಟಿಸುವಂತೆ ಆಫರ್ ನೀಡಿದ್ದು, ಪುನೀತ್ ರಾಜ್ ಕುಮಾರ್ ಜತೆ ಅಭಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು. ಅಣ್ಣಾವ್ರ ಭೇಟಿಯಾದ ಸಮಯದಲ್ಲಿ ಪಾರ್ವತಮ್ಮ ತಮಗೆ ರಮ್ಯಾ ಎಂದು ಹೆಸರಿಟ್ಟ ಆ ಕ್ಷಣವನ್ನು ರಮ್ಯಾ ನೆನಪಿಸಿಕೊಂಡರು. ಮೊದಲ ಸಿನಿಮಾದಲ್ಲಿ ಅಪ್ಪು ತನಗೆ ಮಾಡಿದ ಸಹಾಯ. ಮೊದಲ ಚೆಕ್ ಅನ್ನು ಅಪ್ಪುವಿನಿಂದ ಪಡೆದುಕೊಂಡಿದ್ದು ಎಲ್ಲವನ್ನೂ ನೆನಪಿಸಿಕೊಂಡರು. ರಾಘಣ್ಣ ಹಾಗೂ ಶಿವಣ್ಣ ಅವರುಗಳು ವಿಡಿಯೊ ಸಂದೇಶ ಕಳಿಸಿ, ರಮ್ಯಾಗೆ ಶುಭ ಹಾರೈಸಿದರು. ರಮ್ಯಾ ಅಪ್ಪು ನೆನೆದು ಕಣ್ಣೀರು ಹಾಕಿದ್ದು ಪ್ರೇಕ್ಷಕರು ಕೂಡ ಕಣ್ಣೀರು ಹಾಕುವಂತೆ ಮಾಡಿತು.

ಇತ್ತೀಚಿನ ಸುದ್ದಿ

ಜಾಹೀರಾತು