11:54 PM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಜೂನ್ ತಿಂಗಳ ಟಾಪರ್ ಆಗಿ ಮಂಗಳೂರಿನ ಕಾರುಣ್ಯ ಹಾಗೂ ಕಲಬುರಗಿಯ ನೀಲಾಂಬಿಕೆ 

14/07/2022, 21:50

ಮಂಗಳೂರು(reporterkarnataka.com):  ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜೂನ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಮಂಗಳೂರಿನ ಕಾರುಣ್ಯ ಎಂ. ಶೆಟ್ಟಿ ಹಾಗೂ ಕಲಬುರಗಿಯ ನೀಲಾಂಬಿಕೆ ಹೀರೇಮಠ್ ಅವರು ಆಯ್ಕೆಯಾಗಿದ್ದಾರೆ. 


ಮೋಹನ್ ಕುಮಾರ್ ಶೆಟ್ಟಿ ಹಾಗೂ ಅನಿತಾ ಎಂ ಶೆಟ್ಟಿ ದಂಪತಿಯ ಪುತ್ರಿ ಕಾರುಣ್ಯ ಎಂ ಶೆಟ್ಟಿ. ಈಕೆ ಮಂಗಳೂರಿನ ಪೋದರ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ 2ನೇ ತರಗತಿಯ ವಿದ್ಯಾರ್ಥಿನಿ. ಭರತನಾಟ್ಯ, ಸಂಗೀತ, ಡಾನ್ಸ್, ಯಕ್ಷಗಾನ, ಯೋಗ, ಸ್ವಿಮ್ಮಿಂಗ್, ಅಭಿನಯ ಕಾರುಣ್ಯಗೆ ಬಲು ಇಷ್ಟ. ಚಿಕ್ಕಂದಿನಿಂದಲೂ ಡಾನ್ಸ್ ನಲ್ಲಿ ಅತಿಯಾದ ಆಸಕ್ತಿಯನ್ನು ಹೊಂದಿದ್ದಳು.ಪ್ರಸ್ತುತ ಈಕೆ ವಿದುಷಿ ಸುನೀತ ಜಯಂತ್ ಉಳ್ಳಾಲ ಅವರಲ್ಲಿ ಭರತನಾಟ್ಯ ಮತ್ತು ಸಂಗೀತ ಅಭ್ಯಾಸ ಮಾಡುತ್ತಾ ಇದ್ದಾಳೆ.  ಚೇತನ ಅವರಲ್ಲಿ ಸಹ ನೃತ್ಯ ಅಭ್ಯಾಸ ಮಾಡುತ್ತಾಳೆ. ಗುರುಗಳಾದ ರಾಕೇಶ್ ರೈ ಅಡ್ಕ ಅವರಲ್ಲಿ ಯಕ್ಷ ನಾಟ್ಯ ಕಲಿಯುತ್ತಿದ್ದಾಳೆ.
ಕಾರುಣ್ಯ ಅವರು ಕೃಷ್ಣ ವೇಷ ಸ್ಪರ್ಧೆ, ಫ್ಯಾನ್ಸಿ ಡ್ರೆಸ್, ಬಂಟರ ಸಂಘ ಹೀಗೆ ಹಲವಾರು ಕಡೆ ಪ್ರಶಸ್ತಿಗಳನ್ನು ಪಡೆದಿದ್ದಾಳೆ. 10-15 ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುವ ಆಕೆ ವಾಯ್ಸ್ ಆಫ್ ಆರಾಧನದ ಪದ್ಮಶ್ರೀ ಅವರು ಅವಕಾಶ ನೀಡಿದ ಕಾರಣ ಸ್ಪಂದನ ಟಿವಿ ಹಾಗೂ ಸಾಯಿ ಈಶ್ವರ ಟಿವಿ ಯಲ್ಲಿ ಸಹ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ.
ನೀಲಾಂಬಿಕೆ 6ನೇ ತರಗತಿ ವಿದ್ಯಾರ್ಥಿನಿ. ಈಕೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮ ದ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭೆ.  
ತಂದೆ ರೇವಣಸಿದ್ದಯ್ಯ ಹಿರೇಮಠ. ತಾಯಿ ಸೌಭಾಗ್ಯ ಅವರ ಮುದ್ದಿನ ಮಗಳು.
ವಾಯ್ಸ್ ಆಫ್ ಆರಾಧನಾ ಕಾರ್ಯಕ್ರಮದಲ್ಲಿ ಪ್ರತಿ ದಿನ ಭಾಗವಹಿಸಿ ಎರಡು  ಸಲ ಬಹುಮಾನ ಗಳಿಸಿದ್ದಾಳೆ.  

ಓದೋದ್ರಲ್ಲಿ ಬರೆಯೋದರಲ್ಲಿ ತುಂಬಾನೇ ಮುಂದೆ ಇದ್ದಾಳೆ. ಹಾಗೇನೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಎತ್ತಿದ ಕೈ. ಚಿತ್ರಕಲೆ ಮತ್ತು ಆನ್ಲೈನ್ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಡ್ಯಾನ್ಸ್, ಸಂಗೀತ, ಅಭಿನಯ ಇವಳಿಗೆ ಅಚ್ಚುಮೆಚ್ಚು. ಜನಸ್ಪಂದನದಲ್ಲಿ ಭಾಗವಹಿಸಿ 2ನೇ ಸ್ಥಾನ ಪಡೆದಿದ್ದಾಳೆ. ಸ್ವರ ಮಧುರ ಕಾರ್ಯಕ್ರಮದಲ್ಲಿ ಹಾಡಿದ್ದಾಳೆ. ಹಾಡು ಸಂತೋಷಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಸಂಸ್ಕೃತ ಸಿರಿ ಆನ್ಲೈನ್ ಫೋಟೋಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳೆ. ಕಲಾ ಪ್ರತಿಭೆಗಳು ಪೇಜ್ ನಲ್ಲಿ ಭಾಗವಹಿಸಿದ್ದಾಳೆ. ಟೆನ್ ಆಫ್ ಟ್ಯಾಲೆಂಟ್ ಆಮಂತ್ರಣ ಹೀಗೆ ಒಂದೊಂದೇ ಹೆಜ್ಜೆ ಇಡುತ್ತಿದ್ದಾಳೆ. ಒಟ್ಟಿನಲ್ಲಿ ನೀಲಾಂಬಿಕೆ ಟ್ಯಾಲೆಂಟ್ ಹೊಂದಿರುವ ಹುಡ್ಗಿ.

 

ಇತ್ತೀಚಿನ ಸುದ್ದಿ

ಜಾಹೀರಾತು