ಇತ್ತೀಚಿನ ಸುದ್ದಿ
ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ: 1 ಸಾವಿರ ಲೀಟರ್ ಸಾರಾಯಿ ನಾಶ; ಆರೋಪಿಗಳು ಪರಾರಿ
24/05/2022, 19:44
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಬಳಿಯ ಜಾವಳಿ ಸಮೀಪದ ಕಾಳಿಕಟ್ಟೆ ಗ್ರಾಮದಲ್ಲಿ ಕಳ್ಳಭಟ್ಟಿ ಅಡ್ಡೆಯ ಮೇಲೆ ಬಾಳೂರು ಪೋಲಿಸರು ದಾಳಿ ನಡೆಸಿ ಕಳ್ಳಭಟ್ಟಿ ವಶ ಪಡಿಸಿಕೊಂಡಿದ್ದಾರೆ.

ಕಾಳಿಕಟ್ಟೆ ಗ್ರಾಮದ ಸುರೇಶ್ ಎಂಬುವವರ ತೋಟದಲ್ಲಿದ್ದ ಕಳ್ಳಭಟ್ಟಿ ಅಡ್ಡೆಯ ಮೇಲೆ ಪೋಲಿಸರು ದಾಳಿ ನಡೆಸಿ ೨ ಲೀಟರ್ ಕಳ್ಳಭಟ್ಟಿ ಹಾಗೂ ಸಲಕರಣೆಗಳನ್ನು ವಶಪಡಿಸಿಕೊಂಡು ೧೦೦ ಲೀಟರ್ ಕಳ್ಳಭಟ್ಟಿ ಕೊಳೆಯನ್ನು ನಾಶ ಪಡಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬಾಳೂರು ಠಾಣೆ ಪಿಎಸ್‌ಐ ಪವನ್ ಕುಮಾರ್ ಸಿ.ಸಿ, ಸಿಬ್ಬಂದಿಗಳಾದ ಮಹೇಶ್, ವಸಂತ್, ಮನು, ಪ್ರವೀಣ್, ಅಭಿಜಿತ್, ಸತೀಶ್, ಓಂಕಾರ್, ಹೇಮಂತ್, ಪ್ರದೀಪ್ ಇದ್ದರು.














