5:54 AM Friday7 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

 “ಅಪ್ಪೆ ಮಂತ್ರದೇವತೆ” ಟೈಟಲ್ ಲಾಂಚ್: ಶೀಘ್ರ ತೆರೆಗೆ

27/04/2022, 08:53

ಮಂಗಳೂರು(reporterkarnataka.com): “ಶ್ರೀ ಪ್ರಾಪ್ತಿ ಕಲಾವಿದೆರ್ ಕುಡ್ಲ” ಪೌರಾಣಿಕ /ಜನಪದ ನಾಟಕ  “ಅಪ್ಪೆ ಮಂತ್ರದೇವತೆ” ಶೀಘ್ರ ತೆರೆಗೆ ಬರಲಿದ್ದು,  ಟೈಟಲ್ ಲಾಂಚ್ ( ಶೀರ್ಷಿಕೆ ಬಿಡುಗಡೆ) ನೆರವೇರಿದೆ.

ಈ ಸಂದರ್ಭ ದಾಯ್ಜಿವರ್ಲ್ಡ್ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಪ್ರೊಡಕ್ಷನ್ ಮುಖ್ಯಸ್ಥ ಸ್ಟ್ಯಾನಿ ಬೇಳ, ಪ್ರಸಿದ್ಧ ಹಾಸ್ಯ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಭಾಗವತ ಸುದೇಶ್ ಹೆಗ್ಡೆ ಕುತ್ತೆತ್ತೂರು, ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ., ಕೊರಿಯೊಗ್ರಾಫರ್ ಸುಹಾನ್ ಕುಳಾಯಿ ಇದ್ದರು.

ಪ್ರಶಾಂತ್ ಸಿ.ಕೆ. ರಚನೆ, ನಿರ್ದೇಶನದ ಮಂತ್ರದೇವತೆ ಪೌರಾಣಿಕ ನಾಟಕಕ್ಕೆ ಜಿತೇಂದ್ರ ಕುಂದೇಶ್ವರ ಹಾಗೂ ಸುಹಾನ್ ಕುಳಾಯಿ ಅವರ ಸಮಗ್ರ ನಿರ್ವಹಣೆ ಇರಲಿದೆ. ರಂಗದರಸೆ  ಜೆ.ಕೆ ರೈ ಪಿಲಾರ್  ಮೊದಲಾದ ಅಭಿಜಾತ ಕಲಾವಿದರ ಮೂಲಕ ತುಳು ರಂಗಭೂಮಿಗೆ ಧುಮುಕಲಿದೆ.

ನಾಟಕ ಪ್ರದರ್ಶನಗಳು:

ಪ್ರಶಾಂತ್ ಸಿಕೆ ರಚಿಸಿರುವ “ಮಲೆತ ಮೈಮೆ, ಸತ್ಯೊದ ಬಿರುವೆರ್ , ಕಾರ್ಣಿಕದ ತಂಗಡಿ ,

 ನವನೀತ್ ಶೆಟ್ಟಿ ಕದ್ರಿಯವರ ಅಪ್ಪೆ ಭಗವತಿ, ಮುಂತಾದ ಪೌರಾಣಿಕ/ಜನಪದ ನಾಟಕಗಳನ್ನು ಅದ್ಧೂರಿಯಲ್ಲಿ ಪ್ರದರ್ಶನ ಮಾಡಿದೆ. 

ನಂಕ್ ದಾಯೆ , ನಂಕ್ಲ ಕಾಲ ಬರು ,ಏರೆಗ್ ಗೊತ್ತು , ಪಚ್ಚು ಪಾತೆರೊಡು ,ಹಾಗೂ  ಹಲವಾರು ಸಾಮಾಜಿಕ ನಾಟಕಗಳನ್ನು ಈ ತಂಡ  ಯಶಸ್ವಿಯಾಗಿ ರಂಗದಲ್ಲಿ ಪ್ರದರ್ಶಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು