12:57 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಏಪ್ರಿಲ್ 10 ವಿಶ್ವ ಹೋಮಿಯೋಪತಿ ದಿನ: ಪ್ರಪಂಚದಲ್ಲೇ 2ನೇ ಅತೀ ಹೆಚ್ಚು ಜನರು ಬಳಸುವ ಚಿಕಿತ್ಸಾ ಪದ್ಧತಿ

09/04/2022, 11:05

ಪ್ರತೀ ವರ್ಷ ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ಹೋಮಿಯೋಪತಿ ಒಂದು ವಿಧದ ಚಿಕಿತ್ಸಾ ಪದ್ಧತಿಯಾಗಿದೆ. 

ಅಲೋಪತಿಯ ನಂತರ ವಿಶ್ವದಾದ್ಯಂತ ಎರಡನೇ ಅತೀ ಹೆಚ್ಚು ಜನರು ಬಳಸುವ ಚಿಕಿತ್ಸಾ ಪದ್ಧತಿ ಇದಾಗಿದೆ. ಜರ್ಮನಿನ ಡಾ. ಕ್ರಿಶ್ಚಿಯನ್ ಫೆಡ್ರಿಕ್ ಸಾಮ್ಯೂಯಲ್ ಹ್ಯಾನಿಮನ್ ಎನ್ನುವ ಅಂದಿನ ಕಾಲದ ಖ್ಯಾತ ವೈದ್ಯನಿಂದ ಕಂಡುಹಿಡಿಯಲ್ಪಟ್ಟ ಈ ವೈದ್ಯ ಪದ್ಧತಿ ಸಿಮಿಲಿಯಾ ಸಿಮಿಲಿಬಸ್ಕ್ಯೂರೆಂಟರ್ ಎಂಬ ತತ್ವದ ಮೇಲೆ ಆಧಾರಿತವಾಗಿದೆ. ಅಂದರೆ, ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬ ಜನಪ್ರೀಯ ಮಾತಿನಂತೆ , ಒಬ್ಬ ರೋಗಿಯ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಬೇಕಾದರೆ, ಅದೇ ಲಕ್ಷಣವನ್ನು  ಉಂಟುಮಾಡಬಲ್ಲ  ಔಷಧವನ್ನು ಅಲ್ಪ  ಪ್ರಮಾಣದಲ್ಲಿ ನೀಡಿದಾಗ  ರೋಗವನ್ನು ಶಮನ ಮಾಡಬಲ್ಲದು ಎಂದು ಅರ್ಥ.

ಈ ವಿಧಾನದ ಚಿಕಿತ್ಸೆಯ ವೈಶಿಷ್ಟ ಏನನಂದರೆ  ಒಬ್ಬ ರೋಗಿಯ ರೋಗಲಕ್ಷಣಗಳನ್ನು ಮಾತ್ರ ಪರಿಗಣಿಸದೇ, ಆತನ ದೈಹಿಕ ಹಾಗೂ ಮಾನಸಿಕ ವ್ಯಕ್ತಿತ್ವವನ್ನೂ  ಒಟ್ಟುಗೂಡಿಸಿ ಸೂಕ್ತವಾದ ಔಷಧಿಯನ್ನ ನೀಡಿ ಆ ಮೂಲಕ ಆತನ ರೋಗ ನಿರೋಧಕ ಶಕ್ತಿಯನ್ನೂ ಜಾಗೃತಗೊಳಿಸಿ ದೇಹವನ್ನು ಆ ರೋಗದ ವಿರುದ್ಧ ಹೋರಾಡುವಂತೆ  ಸಜ್ಜುಗೊಳಿಸುವ ಪ್ರಕ್ರೀಯೆಯಾಗಿದೆ.

ಹಾಗೆಯೇ  ಈ ಔಷಧಿಯ ಮೂಲ ತಿಳಿದುಕೊಳ್ಳುವುದಾದರೆ ಹೆಚ್ಚಿನ ಪ್ರಮಾಣದ ಮದ್ದನ್ನು ಸಸ್ಯಜನ್ಯದಿಂದ  ಇನ್ನೂ ಕೆಲವನ್ನು  ಪ್ರಾಣಿ ಜನ್ಯದಿಂದಲೂ, ಲವಣಗಳು ಲೋಹಗಳ  ಮೂಲದಿಂದಲೂ, ಸಾರ್ಕೋಡ್ ನೋಸೊಡ್ಗಳಿಂದಲೂ ತಯಾರಿಸಲಾಗುತ್ತದೆ.

ಈ ಔಷಧಗಳನ್ನು ಸಣ್ಣ ಗುಳಿಗೆ, ಮಾತ್ರೆ, ದ್ರವ ರೂಪದಲ್ಲಿ, ಚೂರ್ಣದ ರೂಪದಲ್ಲೂ ನೀಡಲಾಗುವುದು.ಇದನ್ನು ಸಣ್ಣ  ಶಿಶುವಿನಿಂದ ಹಿಡಿದು ವಯೋವೃದ್ದರು,

ಮಹಿಳೆಯರು  ಸಹ ಯಾವುದೇ ಹಿಂಜರಿಕೆ ಇಲ್ಲದೆ ತೆಗೆದುಕೊಳ್ಳಬಹುದು. ಈ ಚಿಕಿತ್ಸೆಯಿಂದ ಯಾವುದೇ ರೀತಿಯ ಗಂಭೀರ ಅಡ್ಡ  ಪರಿಣಾಮಗಳಿಲ್ಲ. ಸಾಮಾನ್ಯವಾಗಿ ಹೊಮಿಯೋಪತಿಯ ಬಗ್ಗೆ ಕೇಳಿ ಬರುವ ತಪ್ಪುಅಭಿಪ್ರಾಯ ಎಂದರೆ ಇದು ನಿಧಾನಗತಿಯ (ಸ್ಲೋ ಆಕ್ಟಿಂಗ್ ) ಚಿಕಿತ್ಸೆ ಎಂದು.ಆದರೆ ಸತ್ಯ ಸಂಗತಿ ಏನೆಂದರೆ ಅಕ್ಯೂಟ್ ಅಥವಾ ಅಲ್ಪಕಾಲೀನಾ ರೋಗಗಳಾದ ಶೀತ, ಜ್ವರ,ವಾಂತಿಯಂತಹ ತೊಂದರೆಗಳಿಗೆ ಕೆಲವೇ ಗಂಟೆಗಳಲ್ಲಿ ಶಮನ ಮಾಡುವ ಸಾಮರ್ಥ್ಯ ಈ ಔಷಧಗಳಿಗಿವೆ.ಅಂತೆಯೇ ದೀರ್ಘಕಾಲೀನಾ ರೋಗಗಳಾದ ಅಲರ್ಜಿ, ಅಸ್ತಮಾ, ಗಂಟುನೋವು, ಸಂಧಿವಾತ, ಥೈರಾಡ್, ಗ್ಯಾಸ್ಟ್ರಿಟಿಸ್, ಕಿಡ್ನಿ ಕಲ್ಲು, ಉರಿಮೂತ್ರ,ಸ್ತ್ರೀಯರಲ್ಲಿ ಕಂಡುಬರುವ ಮುಟ್ಟಿನ ಸಮಸ್ಯೆ,PCOD, ಗರ್ಭಶಯದ ಗಡ್ಡೆ ಮುಂತಾದ ರೋಗಗಳಿಗೆ ಪರಿಣಾಮಕಾರಿಯಾಗಿದೆ. ಇಡೀ ಸಮಾಜದ ಸ್ವಾಸ್ತ್ಯ ವನ್ನು ಕೆಡಿಸಿದ ಕೊರೊನದಂತಹ ಖಾಯಿಲೆಗಳ ಈ ಸಂದರ್ಭದಲ್ಲಿ ಇ ನಾವೆಲ್ಲಾ ಒಳ್ಳೆಯ ಆರೋಗ್ಯಭ್ಯಾಸ ಹಾಗು ಹವ್ಯಾಸಗಳನ್ನು ರೂಢಿಸಿಕೊಂಡು ರೋಗನಿರೋಧಕ ಶಕ್ತಿಯನ್ನು ಕುಗ್ಗಲು ಬಿಡದೆ ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಸ್ವಸ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ.

ಡಾ.ಭವ್ಯ ಶೆಟ್ಟಿ  BHMS, PGDND

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163  

ಇತ್ತೀಚಿನ ಸುದ್ದಿ

ಜಾಹೀರಾತು