ಇತ್ತೀಚಿನ ಸುದ್ದಿ
ಪದವಿನಂಗಡಿ ಬಳಿ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು
07/05/2021, 13:47
ಮಂಗಳೂರು(Reporter Karnataka)
ಮಂಗಳೂರಿನ ಪದವಿನಂಗಡಿ ಸಮೀಪ ಅಡ್ಡ ಬಂದ ಸ್ಕೂಟರನ್ನು ತಪ್ಪಿಸಲು ಹೋಗಿ ಕೆಟಿಎಂ ಬೈಕ್ ಸವಾರ ರಸ್ತೆ ಬದ್ದಿಯ ಅಂಗಡಿಯ ಜಗುಲಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

ಮೃತ ವ್ಯಕ್ತಿಯನ್ನು ಪ್ರಶಾಂತ್ ಎಂದು ಗುರುತಿಸಲಾಗಿದ್ದು, ನೀರುಮಾರ್ಗದ ಚೇತನಾ ಎಂಟರ್‌ಪ್ರೈಸಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.















