ಇತ್ತೀಚಿನ ಸುದ್ದಿ
ಮಂಗಳೂರಿನ ಶಿಶಿರಾ ಎಸ್. ಆರ್. ಅವರಿಗೆ ಎನ್ ಐಟಿಕೆ ಡಾಕ್ಟರೇಟ್
09/02/2022, 16:21
ಮಂಗಳೂರು(reporterkarnataka.com): ಸುರತ್ಕಲ್ ನ್ಯಾಷನಲ್ ಇನ್ ಸ್ಟಿಟ್ಯೂಶನ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್ ಐಟಿಕೆ) ವಿದ್ಯಾರ್ಥಿನಿ ಶಿಶಿರಾ ಎಸ್. ಆರ್. ಅವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ.
‘ವರ್ಕ್ ಲೋಡ್ ಅಪ್ಟಿಮೈಝೇಶನ್ ಇನ್ ಫೆಡೆರೇಟೆಡ್ ಕ್ಲೌಡ್ ಎನ್ವರ್ನಮೆಂಟ್ ‘ ವಿಷಯದ ಕುರಿತು ಶಿಶಿರಾ ಅವರು ಪಿಎಚ್ ಡಿ ಪದವಿ ಪಡೆದಿದ್ದಾರೆ. ಎನ್ ಐಟಿಕೆಯ ಮೆಥಾಮೆಟಿಕಲ್ ಆ್ಯಂಡ್ ಕಂಪ್ಯೂಟೇಶನಲ್ ಸೈನ್ಸ್ ವಿಭಾಗದಡಿ ಪ್ರೊ. ಎ. ಕಂದಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪಿಎಚ್ ಡಿ ಡಿಗ್ರಿಯನ್ನು ಅವರು ಪೂರೈಸಿದ್ದಾರೆ. ಮಾಸ್ಟರ್ ಆಫ್ ಟೆಕ್ನಾಲಜಿ ಇನ್ ಕಂಪ್ಯೂಟರ್ ನೆಟ್ ವರ್ಕ್ ಎಂಜಿನಿಯರಿಂಗ್ ನಲ್ಲಿ ಅವರು ಚಿನ್ನದ ಪದಕ ಪಡೆದಿದ್ದರು.
ಶಿಶಿರಾ ಅವರು ಮಂಡ್ಯದ ಎಸ್. ಎಸ್. ಶಿವಾನಂದ ಅವರ ಪತ್ನಿ. ಮಂಗಳೂರಿನ ಬೊಂದೇಲ್ ನಿವಾಸಿಯಾದ ಎಚ್. ಜಿ. ರಾಮಚಂದ್ರ ಹಾಗೂ ಶೀಲಾರಮಣಿ ದಂಪತಿಯ ಪುತ್ರಿ.














