ಇತ್ತೀಚಿನ ಸುದ್ದಿ
ಅಥಣಿ ಪುರಸಭೆ ಚುನಾವಣೆ: ಕುತೂಹಲ ಕೆರಳಿಸಿದ ದಂಪತಿ ಸ್ಪರ್ಧೆ; ರಂಗೇರಿದ ಅಖಾಡ
26/12/2021, 15:14
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ಪುರಸಭೆ ಚುನಾವಣೆಯಲ್ಲಿ ದಂಪತಿ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಅವರು ಯಾರು ಗೊತ್ತೇ? ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾವಸಾಬ್ ಐಹೊಳೆ ವಾರ್ಡ್ ನಂಬರ್ 11ರಲ್ಲಿ ಸ್ಪರ್ದಿಸಿದ್ದಾರೆ ಮತ್ತು ಅವರ
ಪತ್ನಿ ವಿದ್ಯಾ ರಾವಸಾಬ ಐಹೊಳೆ ಅವರು ವಾರ್ಡ್ ನಂಬರ್ 25ರಲ್ಲಿ ಸ್ಪರ್ಧಿಸುತ್ತಿದ್ದಾರೆ.
ಪುರಸಭೆ ಸದಸ್ಯರಾಗಿ ಮತ್ತು ಪುರಸಭೆಯಲ್ಲಿ 11 ತಿಂಗಳು ಅಧ್ಯಕ್ಷರಿದ್ದಾಗ ಸಮಾರು 20 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಮಾಡಿಸಿದ್ದೇನೆ, ಇನ್ನೂ ಹಲವಾರು ಅಭಿರುದ್ದಿ ಕಾರ್ಯಗಳು ಬಾಕಿ ಇವೆ ಅವುಗಳನ್ನು ಪೂರ್ಣ ಗೊಳಿಸಲು ನನಗೆ ಮತ್ತು ನನ್ನ ಪತ್ನಿಗೆ ಮತ್ತೊಮ್ಮೆ ಅವಕಾಶ ನೀಡಿ ನಮ್ಮ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಿ ಹಾಗೂ ಎಲ್ಲ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾವಾಸಬ ಐಹೊಳೆ ಮಾಧ್ಯಮದ ಮೂಲಕ ಕೇಳಿಕೊಂಡರು.














