ಇತ್ತೀಚಿನ ಸುದ್ದಿ
ಕಡಲನಗರಿ ಮಂಗಳೂರಿಗೆ ರಾಷ್ಟ್ರಪತಿ ಕೋವಿಂದ್ ಆಗಮನ: ನಾಳೆ ಶೃಂಗೇರಿ ದೇಗುಲಕ್ಕೆ ಭೇಟಿ
08/10/2021, 00:05
ಮಂಗಳೂರು(reporterkarnataka.com): ರಾಜ್ಯದ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅ.8ರಂದು ಶೃಂಗೇರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದರು.


ರಾಷ್ಟಪತಿ ಅವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ರಾಷ್ಟ್ರದ ಪ್ರಥಮ ಪ್ರಜೆಯನ್ನು ಸ್ವಾಗತಿಸಿದರು.
ನಂತರ ಅಲ್ಲಿಂದ ರಾಷ್ಟ್ರಪತಿಯವರು ವಾಸ್ತವ್ಯಕ್ಕಾಗಿ ನಗರದ ಅತಿಥಿಗೃಹಕ್ಕೆ ಪ್ರಯಾಣಿಸಿದರು.














