ಇತ್ತೀಚಿನ ಸುದ್ದಿ
ಸಂಭ್ರಮ – ಸಡಗರದಲ್ಲಿ ಸಂಪನ್ನಗೊಂಡ ಹಲ್ಯಾಳ ಗ್ರಾಮದ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ: ದೇವರಿಗೆ ಮಹಾಭಿಷೇಕ
11/09/2021, 15:01
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ ಸಂಭ್ರಮ – ಸಡಗರದಿಂದ ಶನಿವಾರ ಸಂಪನ್ನಗೊಂಡಿತು.




ಬೆಳಂಬೆಳಗ್ಗೆ ಶಿವರಾಯ ಮುತ್ಯಾ ಪೂಜಾರಿಯಾದ ಸೋಮಣ್ಣ ಪೂಜಾರಿ ಅವರಿಂದ ವಿಶೇಷ ಪೂಜೆನೆರವೇರಿತು. ಪಂಚಾಮೃತದಿಂದ ದೇವರಿಗೆ ಮಹಾಭಿಷೇಕ ಮಾಡಲಾಯಿತು. ಗ್ರಾಮದ ಹಲವಾರು ಬೀದಿಗಳಲ್ಲಿ ಮೆರವಣಿಗೆ ನಡೆದು ಗ್ರಾಮದ ನಟ್ಟ ನಡುವೆ ಹಲಗ ಹಾಯುವುದು ಒಂದು ವಿಶೇಷವಾಗಿದೆ.









ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವಿಠ್ಠಲ್ ಮಲಾಬದಿ, ಕಾಂಗ್ರೆಸ್ ಯುವ ಮುಖಂಡರಾದ ಚಿದಾನಂದ್ ಮುಕುಣಿ, ಮುತ್ತಪ್ಪ ಸನದಿ, ಸಿದ್ದರಾಯ್ ಬಿಸನಾಯಿಕ, ವಿನೋದ್ ನಾಯಿಕ, ಶಶಿಕಾಂತ್ ದಳವಾಯಿ, ಸಂತೋಷ್ ಪಾರ್ಥನಹಳ್ಳಿ, ಶಿವರಾಜ್ ಬಾಗಿ ಹಾಗೂ ಸಮಸ್ತ ಹಲ್ಯಾಳದ ಗ್ರಾಮಸ್ಥರು ಭಾಗವಹಿಸಿದರು.














