ಇತ್ತೀಚಿನ ಸುದ್ದಿ
ಅರಣ್ಯ ಸಚಿವ ಅರವಿಂದ ಲಿಂಬಾವಳಿ ಇಂದು ಮಂಗಳೂರಿಗೆ: ಪಿಲಿಕುಳ, ಕಟೀಲು, ಕಡಲಕೆರೆಗೆ ಭೇಟಿ
09/07/2021, 08:33
ಮಂಗಳೂರು (reporterkarnataka news): ಅರಣ್ಯ, ಕನ್ನಡ ಮತ್ತು ಸಂಸ್ಕøತಿ ಸಚಿವ ಅರವಿಂದ ಲಿಂಬಾವಳಿ ಜುಲೈ 9 ರಂದು ಜಿಲ್ಲೆಗೆ ಆಗಮಿಸುವರು.
9 ರಂದು ಮಧ್ಯಾಹ್ನ 1.55ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಮಧ್ಯಾಹ್ನ 2.50ಕ್ಕೆ ಪಿಲಿಕುಳ ನಿಸರ್ಗಧಾಮಕ್ಕೆ ತೆರಳಿ ವೀಕ್ಷಿಸಲಿರುವರು. ಸಂಜೆ 4.20ಕ್ಕೆ ಕಟೀಲಿಗೆ ತೆರಳಿ ಶ್ರೀ ದುರ್ಗಾಪರಮೇಶ್ವರಿ ದೇವಿ ದರ್ಶನ ಮಾಡಲಿರುವರು. ಸಂಜೆ 5.20 ಕ್ಕೆ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮ ವೀಕ್ಷಿಸಲಿರುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.