ಇತ್ತೀಚಿನ ಸುದ್ದಿ
ಅರಣ್ಯ ಇಲಾಖೆ ನಡುರಾತ್ರಿ ಕಾರ್ಯಾಚರಣೆ: ಕಾಡಾನೆ ಸೆರೆ; ಇಬ್ಬರ ಬಲಿ ಪಡೆದ ಕಿಲ್ಲರ್ ಸಲಗವೇ ಇದು?
16/11/2023, 11:02
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಎರಡು ತಿಂಗಳ ಅವಧಿಯೊಳಗೆ ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಕುಂದೂರು ಸಮೀಪ ಸೆರೆ ಹಿಡಿಯಲಾಗಿದೆ. ಆದರೆ ಸೆರೆ ಹಿಡಿಯಲಾದ ಕಾಡಾನೆ ಕಿಲ್ಲರ್ ಸಲಗವಲ್ಲ ಎಂಬ ವದಂತಿಯೂ ಇದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಸಾಕು ಅನೆಯ ಮೂಲಕ ನಿನ್ನೆ ಮಧ್ಯಾಹ್ನದಿಂದ ಕಾರ್ಯಾಚರಣೆ ಆರಂಭಿಸಿದ್ದರು. ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂದೂರು ಸಮೀಪ ಕಾಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಯಿತು.ಆದರೆ ಕಿಲ್ಲರ್ ಸಲಗ ಬಿಟ್ಟು ಬೇರೆ ಸಲಗವನ್ನು ಸೆರೆ ಹಿಡಿಯಲಾಗಿದೆ ಎಂಬ ವದಂತಿ ಹಬ್ಬಿದೆ. ಸೆರೆಯಾದ ಕಾಡಾನೆ ಯಾವುದು ಅಂತ ಅರಣ್ಯ ಇಲಾಖೆ ಸ್ಪಷ್ಟನೆ ನೀಡಿಲ್ಲ. ಇತ್ತೀಚೆಗೆ ಮಹಿಳೆಯೊಬ್ಬರು ಕಾಡಾನೆಗೆ ಬಲಿಯಾದ ಬಳಿಕ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ.