2:33 AM Sunday11 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು

ಇತ್ತೀಚಿನ ಸುದ್ದಿ

ಅರಣ್ಯ ಭೂಮಿ ಅಕ್ರಮ ಒತ್ತುವರಿ: ಬಲಾಢ್ಯ ಭೂಗಳ್ಳರ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ

13/10/2023, 12:45

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಅರಣ್ಯ ಭೂಮಿ ಎರಡನೇ ಒತ್ತುವರಿ ಕಾರ್ಯಚರಣೆ ಮುಂದುವರೆಸಿ ಬಲಾಡ್ಯ ಶ್ರೀಮಂತರಿಗೂ ಬಡವರಿಗೂ ಕಾನೂನು ಒಂದೇ ಎಂದು ಸಾಬೀತುಪಡಿಸಬೇಕೆಂದು ರೈತ ಸಂಘದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲುರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಆಕ್ರಮ ದರಕಾಸ್ತ್ ಕಮಿಟಿ ಮೂಲಕ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ೩೦ -೪೦ ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಮಂಜೂರಾತಿ ನೆಪದಲ್ಲಿ ೩೨೦೦ ಎಕರೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾತ್ರ ಒತ್ತುವರಿ ಕಾರ್ಯಾಚರಣೆ ಮಾಡುವ ಮುಖಾಂತರ ಉಪ್ಪು ತಿಂದವರು ನೀರು ಕುಡಿಯಲೇಬೇಕೆಂಬ ಗಾದೆಯಂತೆ ಮೊದಲನೇ ಹಂತದಲ್ಲಿ ೧೫೫೦ ಎಕರೆ ಅರಣ್ಯ ಭೂಮಿಯನ್ನು ಬಲಾಢ್ಯ ಭೂಗಳ್ಳರಿಂದ ವಶಪಡಿಸಿಕೊಂಡ ಅರಣ್ಯ ಅಧಿಕಾರಿಗಳಿಗೆ ರೈತ ಸಂಘದಿಂದ ಅಭಿನಂದನೆ ಸಲ್ಲಿಸಿ ಎರಡೇ ಹಂತದ ಕಾರ್ಯಾಚರಣೆ ಪ್ರಾರಂಭ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.

ಅರಣ್ಯ ಒತ್ತುವರಿ ತೆರೆವುಗೊಳಿಸುತ್ತಿರುವ ಅಧಿಕಾರಿಗಳ ವಿರುದ್ದ ತನ್ನ ಪ್ರತಾಪವನ್ನು ತೋರಿಸುವ ಜೊತೆಗೆ ಬಲಾಡ್ಯ ಭೂಗಳ್ಳರ ಪರ ನಿಂತು ದೌರ್ಜನ್ಯ ದಬ್ಬಾಳಿಕೆ ಮಾಡುತ್ತಿರುವ ಸಂಸದರ ಒತ್ತಡಕ್ಕೆ ಅರಣ್ಯ ಅಧಿಕಾರಿಗಳು ಮಣಿದಿದ್ದೀರಾ ಎಂದು ಪ್ರಶ್ನೆ ಮಾಡಿದರು. ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ಅರಣ್ಯ ಅಧಿಕಾರಿಗಳು ಶ್ರೀಮಂತರಿಗೆ ಒಂದೇ ಕಾನೂನು ಪಾಲನೆ ಮಾಡಬೇಕು ಅದನ್ನು ಬಿಟ್ಟು ಸಣ್ಣ ಪುಟ್ಟ ರೈತರ ಭೂ ಒತ್ತುವರಿ ತೆರೆವುಗೊಳಿಸಿ ನೂರಾರು ಎಕರೆ ಒತ್ತುವರಿದಾರರ ಒತ್ತುವರಿ ತೆರೆವುಗೊಳಿಸದೆ ದಿನಗಳು ಕಳೆಯುವುದು ಸಾರ್ವಜನಿಕರು ಅರಣ್ಯ ಇಲಾಖೆಯ ಮೇಲಿಟ್ಟಿರುವ ಕಳೆದು ಕೊಳ್ಳುವಂತಾಗುತ್ತದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಹೆಚ್ಚಿನ ಪೋಲಿಸ್ ಭದ್ರತೆ ಪಡೆದು ಎರಡನೇ ಅರಣ್ಯ ಒತ್ತುವರಿ ಕಾರ್ಯಚಾರಣೆ ಪ್ರಾರಂಭ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅರಣ್ಯ ಉಪ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲು ರವರು ಅರಣ್ಯ ಭೂಮಿ ನನ್ನ ಜನ್ಮ ಕೊಟ್ಟ ತಾಯಿಗೆ ಸಮಾನ ಅರಣ್ಯ ಭೂಮಿ ಉಳಿವಿಗಾಗಿ ನನ್ನ ಪ್ರಾಣವನ್ನು ಬೇಕಾದರೂ ಒತ್ತೆ ಇಡುತ್ತೇನೆಹೊರತು ಒಂದಿಚು ಅರಣ್ಯ ಭೂಮಿ ಭೂಗಳ್ಳರ ಪಾಲಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಮನವಿ ನೀಡುವಾಗ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ರಾ.ಪ್ರ. ಕಾರ್ಯದರ್ಶಿ ಫಾರೂಖ್ ಪಾಷ, ಜುಬೇರ್‌ಪಾಷ, ಬಂಗಾರಿ ಮಂಜು, ಭಾಸ್ಕರ್, ವಿಜಯ್ ಪಾಲ್, ಮಂಗಸAದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ರಾಮಸಾಗರ ವೇಣು, ಸುರೇಶ್‌ಬಾಬು, ಕದಿರಿನತ್ತ ಅಪ್ಪೋಜಿರಾವ್, ಯಾರಂಘಟ್ಟ ಗಿರೀಶ್, ಹೆಬ್ಬಣಿ ಆನಂದರೆಡ್ಡಿ, ಮಂಗಸAದ್ರ ನರಸಿಂಹಯ್ಯ, ತರ‍್ನಹಳ್ಳಿ ಆಂಜಿನಪ್ಪ ಸುಪ್ರೀಂಚಲ, ವಿನುತ್‌ಗೌಡ,

ಇತ್ತೀಚಿನ ಸುದ್ದಿ

ಜಾಹೀರಾತು