ಇತ್ತೀಚಿನ ಸುದ್ದಿ
ಅರಂತೋಡು: ಗೋಕಳ್ಳರ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು; 7 ದನಗಳು ಪೊಲೀಸರ ವಶಕ್ಕೆ
11/12/2024, 14:00
ಸುಳ್ಯ(reporterkarnataka.com): ಅನಧಿಕೃತವಾಗಿ 7 ಗೋವುಗಳನ್ನು ಸಾಗಿಸುತ್ತಿದ್ದ ಎರಡು ವಾಹನಗಳನ್ನು ಅರಂತೋಡು ಬಳಿ ಸ್ಥಳೀಯರು ತಡೆದು ಇಬ್ಬರನ್ನು ಪೊಲೀಸರಿಗೊಪ್ಪಿಸಿದ್ದಾರೆ.
ಸದ್ಯ ಏಳು ಗೋವುಗಳನ್ನು ಕೂಡ ಸುಳ್ಯದ ಪೊಲೀಸ್ ಠಾಣೆಗೆ ತೆಗೆದುಕೊಂಡು ಬರಲಾಗಿದೆ. ಪಿಕಪ್, ಮಿನಿ ಲಾರಿ ಸೇರಿದಂತೆ ಎರಡು ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.