ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನ ಸಂಸ್ಥೆಯ ಜುಲೈ ತಿಂಗಳ ಸಹಾಯಧನ ರಾಜೇಶ್ ಕೆಂಚನಕೆರೆಗೆ ಹಸ್ತಾಂತರ
04/09/2022, 16:57

ಮೂಡುಬಿದರೆ(reporterkarnataka.com):ಆರದಿರಲಿ ಬದುಕು ಆರಾಧನ ಸಂಸ್ಥೆಯ ಜುಲೈ ತಿಂಗಳ ಸಹಾಯವನ್ನು ವಿಜಯಾ ಕಲಾವಿದರಾದ ರಾಜೇಶ್ ಕೆಂಚನಕೆರೆ ಅವರಿಗೆ ಹಸ್ತಾಂತರಿಸಲಾಯಿತು.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಆರದಿರಲಿ ಬದುಕು ಆರಾಧನಾ ತಂಡದಿಂದ 30 ಸಾವಿರ ರೂಪಾಯಿ ಧನ ಸಹಾಯವನ್ನು ಅವರ ಪತ್ನಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಡಾ.ನಾಗರಾಜ ಶೆಟ್ಟಿ ಅಂಬೂರಿ, ಸುಜಿತ್ ಶೆಟ್ಟಿ, ಅಭಿ ಷೇಕ್ ಶೆಟ್ಟಿ, ದೇವಿ ಪ್ರಸಾದ್, ದೀನ್ ರಾಜ್ ಕೆ. ಬಸವರಾಜ್ ಮಂತ್ರಿ, ಶ್ರೀನಿವಾಸ ಬಜಪೆ, ಪ್ರಸಾದ್ ನಾಯಕ್ ಉಡುಪಿ, ಧನಂಜಯ ಶೆಟ್ಟಿ, ಲೀಲೇಶ್ ನೀಲೇಶ್ ಶೆಟ್ಟಿಗಾರ್, ಪ್ರಭಾಕರ ಮಂಗಳೂರು,
ಗಣೇಶ್ ಪೈ, ರಾಕೇಶ್ ಪೊಳಲಿ, ಶ್ರೀಕಾಂತ್ ಭಟ್ ಉಪಸ್ಥಿತರಿದ್ದರು.