ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನಾ ಸಂಸ್ಥೆ: ಡಿಸೆಂಬರ್ ತಿಂಗಳ ನೆರವು ಕ್ಯಾನ್ಸರ್ ಪೀಡಿತೆಗೆ ಹಸ್ತಾಂತರ
05/01/2022, 23:48
ಮಂಗಳೂರು(reporterkarnataka.com):ಆರದಿರಲಿ ಬದುಕು ಆರಾಧನ ಸಂಸ್ಥೆಯ ಡಿಸೆಂಬರ್ ತಿಂಗಳ ಸಹಾಯ ಹಸ್ತವನ್ನು ಕ್ಯಾನ್ಸರ್ ನಿಂದ ಬಳಲುತ್ತಿರುವ ಉಡುಪಿ ಕುಂಜಿಬೆಟ್ಟುವಿನ ಸವಿತಾ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.
ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿದ ತಂಡ ಸಹಾಯ ಹಸ್ತ ನೀಡಿತು. ಈ ಸಂದರ್ಭದಲ್ಲಿ ನಟಿ ಆರಾಧನ ಭಟ್ , ದೇವಿಪ್ರಸಾದ್ ಶೆಟ್ಟಿ, ಅಭಿಷೇಕ್ ಶೆಟ್ಟಿ ಐಕಳ, ಶ್ರೀನಿವಾಸ ಬಜಪೆ, ನವೀನ್ ಪುತ್ತೂರು, ಪ್ರಸಾದ್ ಉಡುಪಿ, ಬಸವರಾಜ ಮಂತ್ರಿ, ವಿವೇಕ್ ಪ್ರಭು, ನಾಗರಾಜ ಶೆಟ್ಟಿ, ಅಂಬೂರಿ ಗಣೇಶ್ ಪೈ, ನಟರಾಜ ತೊಕ್ಕೂಟ್ಟು , ಪದ್ಮಶ್ರೀ ಭಟ್ ನಿಡ್ಡೋಡಿ, ಧನಂಜಯ ಶೆಟ್ಟಿ,ಪ್ರಭಾಕರ ಮಂಗಳೂರು, ರಾಕೇಶ್ ಪೊಳಲಿ ಉಪಸ್ಥಿತರಿದ್ದರು