ಇತ್ತೀಚಿನ ಸುದ್ದಿ
ಅಪಘಾತದಲ್ಲಿ ಗಾಯಗೊಂಡಿದ್ದ ಪತ್ರಕರ್ತ, ಪತ್ರಿಕೋದ್ಯಮ ಪ್ರಾಧ್ಯಾಪಕ ಪೌಲೋಸ್ ಬೆಂಜಮಿನ್ ನಿಧನ
12/07/2023, 18:26

ಮಂಗಳೂರು(reporterkarnataka.com):ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪತ್ರಕರ್ತ ಹಾಗೂ ಕಾಲೇಜಿನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿದ್ದ ಪೌಲೋಸ್ ಬೆಂಜಮಿನ್ ಅವರು ನಿಧನರಾದರು.
ಮೈಸೂರು ಸಮೀಪದ ಕೊಳ್ಳೇಗಾಲ ನಿವಾಸಿಯಾಗಿದ್ದ ಅವರು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು ಮತ್ತು ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ. ಅವರು ಬೆಂಗಳೂರಿನ ಸೈಂಟ್
ಪಾವ್ಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಅಸಿಸ್ಟಂಟ್ ಪ್ರೊಫೆಸರ್ ಆಗಿದ್ದರು.
ದೆಹಲಿಯಲ್ಲಿಯೂ ಅವರು ಕಾರ್ಯನಿರ್ವಹಿಸಿದ್ದರು.
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಕಳೆದ 25 ದಿನಗಳಿಂದ ಸಾವು- ಬದುಕಿನ ಹೋರಾಟದಲ್ಲಿದ್ದರು.