ಇತ್ತೀಚಿನ ಸುದ್ದಿ
ಅನ್ಯ ಧರ್ಮಗಳ ಆಚಾರಗಳಿಗೆ ಅಗೌರವ ಕೊಡುವುದು ಹಿಂದೂ ಧರ್ಮಕ್ಕೆ ದ್ರೋಹ ಬಗೆಯುವುದಕ್ಕೆ ಸಮ: ಮಾಜಿ ಸಚಿವ ಈಶ್ವರಪ್ಪ ಆಝಾನ್ ಬಗ್ಗೆ ಹೇಳಿಕೆಗೆ ಡಾ.ಸುಮತಿ ಹೆಗ್ಡೆ ತೀವ್ರ ಆಕ್ಷೇಪ
14/03/2023, 18:34
ಮಂಗಳೂರು(reporterkarnataka.com): ಒಂದು ಧರ್ಮದಲ್ಲಿದ್ದುಕೊಂಡು ಇನ್ನೊಂದು ಧರ್ಮದ ಆಚಾರ ವಿಚಾಗಳಿಗೆ ಅಗೌರವ ಕೊಡುವುದು ಎಲ್ಲಷ್ಟೂ ಸರಿಯಲ್ಲ. ಇತ್ತೀಚೆಗೆ ಮಂಗಳೂರಿನಲ್ಲಿ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇಸ್ಲಾಮ್ ಧರ್ಮದ ಬಗ್ಗೆ ಟೀಕಿಸಿ ದೇವರ ಬಗ್ಗೆ ಅಪಹಾಸ್ಯ ಮಾಡಿದ್ದನ್ನು ಉಲ್ಲೇಖಿಸಿ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸುಮತಿ ಎಸ್ ಹೆಗ್ಡೆ ಖಂಡಿಸಿದ್ದಾರೆ.
ಈಶ್ವರಪ್ಪ ಅವರ ನಿಲುವು ಹಿಂದೂ ಧರ್ಮಕ್ಕೆ ಅಪಚಾರ ವೆಸಗಿದಂತೆ. ಹಿಂದೂ ಧರ್ಮದಲ್ಲೂ ಎಲ್ಲೂ ಇನ್ನೊಂದು ಧರ್ಮದ ಬಗ್ಗೆ ಕೆಟ್ಟದಾಗಿ ನುಡಿಯಲು ಎಲ್ಲಿಯೂ ಹೇಳಲಿಲ್ಲ. ಅದಲ್ಲದೆ ದೇವರು ಎಲ್ಲರಿಗೂ ಒಂದೇ . ಅವರವರ ಧರ್ಮದಲ್ಲಿ ಬೇರೆ ಬೇರೆ ಹೆಸರಲ್ಲಿ ಕರೆಯುತ್ತಾರೆ ಅಷ್ಟೇ. ಪರಮಾತ್ಮನನ್ನು ಅವಹೇಳನ ಮಾಡುವಂತಹ ಕೀಳುಮಟ್ಟದ ಹೇಳಿಕೆ ಕೊಡುವುದೆಂದರೆ ಅವರ ಘನತೆಗೆ ಯೋಗ್ಯವಲ್ಲದ ವಿಚಾರ ಮಾತ್ರವಲ್ಲ ಅವರ ಸಣ್ಣತನಕ್ಕೆ ನಿದರ್ಶನ. ಈ ವಿಚಾರದಲ್ಲಿ ಈಶ್ವರಪ್ಪರವರು ಅಲ್ಪಸಂಖ್ಯಾತ ಮುಸ್ಲಿಮರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಇವರನ್ನು ಕೂಡಲೇ ಬಂಧಿಸಿ , ಸೂಕ್ತ ಕಾಣೂನು ಕ್ರಮದಂತೆ ಶಿಕ್ಷಿಸಿಬೇಕೆಙದು ಸುಮತಿ ಹೆಗ್ಡೆ ಒತ್ತಾಯಿಸಿದ್ದಾರೆ.














