ಇತ್ತೀಚಿನ ಸುದ್ದಿ
ಅಂತರಗಂಗೆಯಲ್ಲಿ ಊಟಕನೂರ ಶ್ರೀಗಳ ಜಾತ್ರಾ ಮಹೋತ್ಸವ; ಮಹಿಳೆಯರಿಂದ ಮಂಗಳಾರತಿ
26/10/2021, 12:17
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ತಾಲೂಕಿನ ಹಿರೇ ಅಂತರಗಂಗಿ ಗ್ರಾಮದ ಪ್ರತಿವರ್ಷದಂತೆ ಈ ವರ್ಷ ಉಟಕನೂರು ದೇಶಿಕೇಂದ್ರ ಮರಿ ಬಸವಲಿಂಗ ಶಿವಾಚಾರ್ಯರ ಆಶೀರ್ವಾದ ಮತ್ತು ನೇತೃತ್ವದಲ್ಲಿ ಮಸ್ಕಿ ಗಚ್ಚಿನ ಹಿರೇಮಠ ಶ್ರೀ ವರ ರುದ್ರಮುನಿ ಶಿವಾಚಾರ್ಯರು ಆಶೀರ್ವಾದದಿಂದ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಪೂಜೆ ಅಭಿಷೇಕದೊಂದಿಗೆ ಜಾತ್ರಾ ಮಹೋತ್ಸವ ನಡೆಯಿತು.
ಈ ವರ್ಷವೂ ಪೂಜ್ಯರ ಸಮ್ಮುಖದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ಮಹಾಮಂಗಳಾರತಿ, ಅನ್ನಪ್ರಸಾದ ಕಾರ್ಯಕ್ರಮ ಜರುಗಿತು. ಭಕ್ತರು ತಮ್ಮ ಹರಕೆಗಳು ತೀರಿಸುತ್ತಾ ಉರುಳುಸೇವೆ, ಭಜನೆ ಮುಂತಾದವುಗಳನ್ನು ನೆರವೇರಿಸಿದರು.
ಸಂಜೆ ಜಂಗಮ ಸ್ವಾಮೀಜಿಗಳಿಂದ ಕಳಸ ಕನ್ನಡಿ ವಾದ್ಯಗಳೊಂದಿಗೆ ಜೈಕಾರ ಘೋಷ ಕೂಗುತ್ತಾ ಶ್ರೀಗಳ ಉತ್ಸವ ಅತಿ ಸರಳ ರೀತಿಯಲ್ಲಿ ಜರುಗಿತು. ಯಾವುದೇ ಕಿರಿಕಿರಿಯಿಲ್ಲದೆ ಭಜನೆ ಮೂಲಕ ತಾತನ ಜಾತ್ರಾ ಮಹೋತ್ಸವ ನಡೆಯಿತು. ರಾತ್ರಿ ಮಹಿಳೆಯರಿಂದ ಕಳಸ ಕನ್ನಡ ಮಂಗಳಾರತಿ ಜರುಗಿತು. ಈ ಕಾರ್ಯಕ್ರಮಕ್ಕೆ ಮ್ಯಾದರಾಳ ನಾಗರಬೆಂಚಿ ಮೆದಿಕಿನಾಳ ತಾಂಡ ಚೆನ್ನಮ್ಮನ ಹಟ್ಟಿ ಗೊಲ್ಲರಹಟ್ಟಿ ಗ್ರಾಮದಿಂದ ಭಕ್ತರು ಆಗಮಿಸಿದ್ದರು. ತಾತನ ಕೃಪೆಗೆ ಪಾತ್ರರಾಗಿ ಪುನೀತರಾದರು.