ಇತ್ತೀಚಿನ ಸುದ್ದಿ
ಅಂತರ್ ಜಿಲ್ಲಾ ದರೋಡೆಕೋರರ ಬಂಧನ: 4.65 ಲಕ್ಷ ರೂ. ಮೌಲ್ಯದ ಸೊತ್ತು ವಶ: ಅಥಣಿ ಪೊಲೀಸರ ಕಾರ್ಯಾಚರಣೆ
11/06/2021, 15:04
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ಡಿವೈಎಸ್ ಪಿ ಎಸ್. ವಿ. ಗಿರೀಶ್ ಮತ್ತು ಅಥಣಿ ಸಿಪಿಐ ಶಂಕರಗೌಡ ಬಸನಗೌಡರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 10 ಮಂದಿ ಅಂತರ್ ಜಿಲ್ಲಾ ದರೋಡೆಕೋರರನ್ನು
ಅಥಣಿ ಪೋಲಿಸರು ಬಂಧಿಸಿದ್ದು, 4.65 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
ಕಾವಲುಗಾರನನ್ನು ಕಟ್ಟಿ ಹಾಕಿ ದರೋಡೆ ಮಾಡಿದ್ದ ಪ್ರಕರಣ ಇದಾಗಿದೆ. 10 ಮಂದಿ ಆರೋಪಿಗಳಿಂದ5 ಬೈಕ್, 1 ಕಾರು ಮತ್ತು ಗ್ಯಾಸ್ ಕಟರ್ ವಶಪಡಿಸಿಕೊಳ್ಳಲಾಗಿದೆ.
ಅಥಣಿ ಪಟ್ಟಣದ ನಂದಗಾಂವ ರಸ್ತೆಯಲ್ಲಿ ವೆಂಕಟೇಶ್ವರ ವೈನ್ಸನಲ್ಲಿ ಈ ದರೋಡೆ ಪ್ರಕರಣ ನಡೆದಿತ್ತು. ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದ
ರಾಜು ಗಳತಗಿ, ಸಂಜು ಗಳತಗಿ, ಮಹಂತೇಶ್ ಗಳತಗಿ, ಅಲಖನೂರ ಗ್ರಾಮದ ಶಿವಾನಂದ, ಸಿರಗಣ್ಣವರ. ಉಮೇಶ ಅಲಿಯಾಸ್ ಪಿಂಟು ಗಡ್ಡಿ ,ರಾಮಚಂದ್ರ ಬಿಸನಾಳ,ಸಿದ್ದರಾಮ ಪಾಟಿಲ,ಜಯವಂತ ಲಗಳಿ,ಆಕಾಶ ಲಗಳಿ,ಸುನೀಲ ಗಡ್ಡಿ ಬಂಧಿತ ಆರೋಪಿಗಳು. ಇವರಿಂದ 1. 50 ಲಕ್ಷ ರೂ. ಮೌಲ್ಯದ 30 ಬಾಕ್ಸ್ ಮದ್ಯ, 2 ಲಕ್ಷ ಮೌಲ್ಯದ ಕಾರು,120000 ಮೌಲ್ಯದ 5 ಬೈಕ್ ಸೇರಿದಂತೆ 4. 65 ಲಕ್ಷ ರೂ. ಮೌಲ್ಯದ ಸರಂಜಾಮು ಜಪ್ತಿ ಮಾಡಲಾಗಿದೆ.