ಇತ್ತೀಚಿನ ಸುದ್ದಿ
ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಥಮ ಬ್ಯಾಚ್ ಹಳೆ ವಿದ್ಯಾರ್ಥಿಗಳ ಸಮ್ಮಿಲನ
12/12/2023, 00:34

ಮೂಡುಬಿದಿರೆ(reporterkarnataka.com):ಸ್ಥಳೀಯ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ೧೯೯೬ ನೇ ಸಾಲಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮತ್ತು ಅಂದಿನ ಎಲ್ಲಾ ಗುರುವೃಂದ ದವರ ಸಮ್ಮಿಲನ ಸಮಾರಂಭವು ಮಾತೃಸಂಸ್ಥೆ ಮೂಡುಬಿದಿರೆಯಲ್ಲಿ ನೆರವೇರಿತು.
ಅಂದಿನ ಪ್ರಾಧ್ಯಾಪಕ ಇಂದಿನ ಕೇಂದ್ರ ಆಯುರ್ವೇದ ಬೋರ್ಡ್ ನವದೆಹಲಿಯ ಅಧ್ಯಕ್ಷರಾದ ಡಾ ಬಿ.ಎಸ್ .ಪ್ರಸಾದ್ ಮುಖ್ಯ ಅತಿಥಿಗಳಾಗಿದ್ದರು. ಅವರು ಮಾತನಾಡುತ್ತಾ ಅಂದಿನ ನೆನಪುಗಳನ್ನು ಮತ್ತು ಡಾ ಮೋಹನ ಆಳ್ವ ಅವರ ಶಿಸ್ತುಬದ್ಧತೆಯನ್ನು ಕೊಂಡಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಡಿ ವಿವೇಕ ಆಳ್ವ ಅವರು ಮಾತನಾಡುತ್ತಾ ತನ್ನ ತಂದೆ ಡಾ ಮೋಹನ ಆಳ್ವರ ದೂರದರ್ಶಿತ್ವ ಮತ್ತು ಕಾರ್ಯತತ್ಪರತೆಗಳ ವಿಶ್ಲೇಷಣೆ ಮಾಡುತ್ತಾ ಆಳ್ವಾಸ್ ಶಿಕ್ಷಣ ಪ್ರತಿಷ್ಢಾನದ ಬೆಳವಣಿಗೆಗಳ ಪಕ್ಷಿನೋಟ ಬೀರಿದರು. ಪ್ರಾಚಾರ್ಯರಾಗಿದ್ದ ಡಾ ಸುರೇಶ ನೆಗಳಗುಳಿಯವರು ಅಧ್ಯಕ್ಷತೆ ವಹಿಸಿದ್ದ ಶುಭಾಶಂಸನಾ ಕಾರ್ಯಕ್ರಮದಲ್ಲಿ ತನ್ನ ಅಂದಿನ ಸೇವೆ ಹಾಗೂ ವಿದ್ಯಾರ್ಥಿಗಳ ಶಿಸ್ತು ಬದ್ಧತೆಯನ್ನು ಕೊಂಡಾಡಿ ಸ್ವರಚಿತ ಗಜಲ್ ಹಾಗೂ ಮುಕ್ತಕ ಮಾಲೆ ವಾಚಿಸಿದರು.
ಡಾ ವಿನಯ ಆಳ್ವ,ಡಾ ಹರೀಶ ನಾಯಕ್, ಡಾ ಗುರು ಪ್ರಸಾದ್, ಡಾ ಮಮತಾ, ಡಾ ರೇವತಿ ಭಟ್, ಡಾ ನಸೀರ್, ಡಾ ಬಾಲಕೃಷ್ಣನ್, ಡಾ. ಉನ್ನಿ ಕೃಷ್ಣನ್, ಡಾ ಜಯಾ, ಡಾ. ಸಜಿತ್, ಡಾ ಸುರೇಖಾ, ಡಾ. ದೀಪ್, ಈಶ್ವರ ಪ್ರಸಾದ್, ಡಾ. ಲಕ್ಷ್ಮೀಶ ಉಪಾಧ್ಯಾಯ, ಡಾ. ನಿರಂಜನ ಆಚಾರ್ಯ, ಡಾ. ಸುಧಾಕರ ರೆಡ್ಡಿ, ಡಾ. ಪ್ರಸನ್ನ ಐತಾಳ ಮುಂತಾದ ಗುರುಗಳು ಭಾಗವಹಿಸಿದ್ದರು.
ಡಾ ಬೀನಾ, ಡಾ. ಪ್ರಮೋದ್ ಕುಮಾರ್, ಡಾ. ವಹೀದಾ ಬಾನು, ಡಾ ಅಶ್ವಿನಿ, ಡಾ. ಪ್ರಿಯದರ್ಶಿನಿ, ಡಾ. ಅಶೋಕನ್, ಡಾ ಸಹೀರ್ ಆಲಿ, ಡಾ ಅನಿಲ್ ಡಿ ಸೋಜ, ಡಾ. ಸವಿತಾ, ಡಾ. ನಯನಾ, ಡಾ. ಪ್ರಭು, ಡಾ ನಝೀರ್ ,ಡಾ ರಶ್ಮಿ ಇನ್ನೂ ಮುಂತಾದ ಅಂದಿನ ಆ ತರಗತಿಯ ಸಹಪಾಠಿಗಳು ತಮ್ಮ ತಮ್ಮಅನುಭವಗಳನ್ನು ಹಂಚಿಕೊಂಡರು.
ಅದ್ದೂರಿಯ ಈ ಕಾರ್ಯಕ್ರಮವು ಗುರು ಶಿಷ್ಯ ಸಂಬಂಧದ ಗಟ್ಟಿತನವನ್ನು ಎತ್ತಿ ತೋರಿಸುವಂತಿತ್ತು.
ಡಾ ಪ್ರಮೋದ್ ಕುಮಾರ್ ಪ್ರಾರ್ಥನೆಯನ್ನೂ ಡಾ. ಪ್ರಿಯದರ್ಶಿನಿ, ಡಾ. ಅಶ್ವಿನಿ ಶೆಟ್ಟಿ ಹಾಗೂ ಡಾ. ನಯನಾ ನಿರೂಪಣೆಯನ್ನೂ ಮಾಡಿದ್ದರು.