ಇತ್ತೀಚಿನ ಸುದ್ದಿ
ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳಿಗೆ ಶಾಶ್ವತ ಮನೆ ಕಲ್ಪಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ
26/09/2023, 20:08

ಮಂಗಳೂರು(reporterkarnataka.com): ಸ್ಮಾರ್ಟ್ ಸಿಟಿಯ ಯೋಜನೆಯಿಂದ ತಮ್ಮ ಗುಡಿಸಲು ಕಳೆದುಕೊಂಡು ಬೀದಿಗೆ ಬರುವ ಭೀತಿಯಲ್ಲಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳಿಗೆ ಶಾಶ್ವತ ಮನೆ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಕರಾವಳಿ ವೃತ್ತಿನಿರತ ಅಲೆಮಾರಿ (ಶಿಳ್ಳೆಕ್ಯಾತ) ಹಕ್ಕುಗಳ ಸಮಿತಿ ಹಾಗೂ ಸಂತ್ರಸ್ತರುಗಳ ನಿಯೋಗದಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಸಂತೋಷ್ ಬಜಾಲ್, ಅಧ್ಯಕ್ಷ ರವಿ ಟಿ.ಎನ್., ಕಾರ್ಯದರ್ಶಿ ವೆಂಕಟೇಶ್, ಸಂತ್ರಸ್ತರುಗಳಾದ ದೊರೆ, ಚಿರಂಜೀವಿ, ಮಧು, ರಮೇಶ, ಮಂಗಳ, ಸರಳ, ರೇಣುಕಾ, ಲಕ್ಷ್ಮಣ, ಶಾಂತ ಕುಮಾರ ಮುಂತಾದವರು ಉಪಸ್ಥಿತರಿದ್ದರು.