7:42 PM Saturday2 - August 2025
ಬ್ರೇಕಿಂಗ್ ನ್ಯೂಸ್
ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು…

ಇತ್ತೀಚಿನ ಸುದ್ದಿ

ಅಲೆಮಾರಿ ಶಿಳ್ಳೆಕ್ಯಾತ ಸಮುದಾಯ ಗುಡಿಸಲಿಗೆ ಜಿಲ್ಲಾಧಿಕಾರಿ ಭೇಟಿ: ಪಡಿತರ ವ್ಯವಸ್ಥೆ, ಔಷಧೋಪಚಾರಕ್ಕೆ ಅಧಿಕಾರಿಗಳಿಗೆ ಸೂಚನೆ

26/05/2021, 19:21

ಮಂಗಳೂರು(reporterkarnataka news): ನಗರದ ಹೊಯಿಗೆ ಬಜಾರ್ ನ ನೇತ್ರಾವತಿ ನದಿ ತೀರದಲ್ಲಿ ಟೆಂಟ್ ಗಳಲ್ಲಿ ಬದುಕುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳನ್ನು ಬುಧವಾರ ಭೇಟಿಯಾಗಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸಮುದಾಯದ ಜನರಿಗೆ ಪಡಿತರ ಹಾಗೂ ಔಷಧೋಪಚಾರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇತ್ತೀಚೆಗೆ ತೌಕ್ತೆ ಚಂಡಮಾರುತದ ಪರಿಣಾಮದಿಂದಾಗಿ ಟೆಂಟ್ ಗಳು ಹಾರಿ ಹೋಗಿ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳು ಹಲವು ಸಮಸ್ಯೆಗಳನ್ನು ಅನುಭವಿಸಿತ್ತು. ಇದಲ್ಲದೆ ಕೊರೊನಾ ಲಾಕ್ಡೌನ್ ನಿಂದಾಗಿ ಒಂದೊತ್ತಿನ ಊಟಕ್ಕೂ ಪಡಿತರ ಇಲ್ಲದೆ ಪರದಾಡುವಂತಾಗಿದೆ.

 ಈ ಸಮುದಾಯಕ್ಕೆ ಆಹಾರ ಸಾಮಗ್ರಿ ಸಹಿತ ಆರ್ಥಿಕ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತವನ್ನು ಡಿವೈಎಫ್ ಐ ಒತ್ತಾಯಿಸಲಾಗಿತ್ತು. ಈ ಬಗ್ಗೆ ಗಮನಹರಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಹೊಯಿಗೆಬಜಾರಿನ ಶಿಳ್ಳೆಕ್ಯಾತ ಅಲೆಮಾರಿ ಜನಾಂಗದವರು ವಾಸಿಸುತ್ತಿರುವ ಕ್ಯಾಂಪ್ ಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದರು. ಶಿಳ್ಳೆಕ್ಯಾತ ಕುಟುಂಬಗಳಿಗೆ ಬೇಕಾಗಿರುವ ಪಡಿತರ ಆಹಾರ ಸಾಮಗ್ರಿಗಳನ್ನು ಒದಗಿಸಿಕೊಡಲು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು. ಅದೇ ರೀತಿ ಸೊಳ್ಳೆ ಪರದೆಗಳನ್ನು ವಿತರಿಸಲು ಹಾಗೂ ಎಲ್ಲರ ಆರೋಗ್ಯ ತಪಾಸಣೆ ನಡೆಸಲು ಸೂಚಿಸಿದರು. ವಸತಿ, ವಿದ್ಯುತ್, ದಾರಿ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಮುಂದಿನ ದಿನ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. 


ಈ ವೇಳೆ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ , ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯ ಗೌರವಾಧ್ಯಕ್ಷರು ಸಂತೋಷ್ ಬಜಾಲ್ , ಅಲೆಮಾರಿ ನಿಗಮದ ಅಧಿಕಾರಿ ಸೋಮಪ್ಪ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು