10:49 PM Tuesday3 - December 2024
ಬ್ರೇಕಿಂಗ್ ನ್ಯೂಸ್
ಕೇರಳದಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ದಾರುಣ ಸಾವು ಫೆಂಗಲ್ ಎಫೆಕ್ಟ್: ಬೆಂಗಳೂರಿನಲ್ಲಿ ಸಾಧಾರಣ ಮಳೆ; ಎಂದಿನಂತೆ ತೆರೆದುಕೊಂಡ ಶಾಲಾ- ಕಾಲೇಜು ಕೂಡ್ಲಿಗಿ: ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರ ಬಂಧನ; ಸಾಮಗ್ರಿ ಜಪ್ತಿ ಮಲೆನಾಡಲ್ಲಿ ಫೆಂಗಲ್ ಅಬ್ಬರ: ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ; ಕಾಫಿ ಬೆಳೆಗಾರರು ಕಂಗಾಲು ತುಮಕೂರು: ಭೀಕರ ರಸ್ತೆ ಅಪಘಾತ; 3 ಮಂದಿ ಮಹಿಳೆಯರ ದಾರುಣ ಸಾವು ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರಗೆ ಮುಖ್ಯಮಂತ್ರಿ ಮೆಚ್ಚುಗೆ ಫೆಂಗಲ್ ಚಂಡಮಾರುತ: ದ.ಕ., ಉಡುಪಿ ಜಿಲ್ಲೆಯ ಶಾಲೆ ಹಾಗೂ ಪಿಯು ಕಾಲೇಜಿಗಳಿಗೆ ನಾಳೆ… ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ವೈಭವದ ಲಕ್ಷದೀಪೋತ್ಸವ ಸಂಪನ್ನ: ದಾಖಲೆ ಸಂಖ್ಯೆಯಲ್ಲಿ ನೆರೆದ… ಸಂಘ ಪರಿವಾರದ ಕೈಗೊಂಬೆಯಂತೆ ವರ್ತಿಸುವ ಪೊಲೀಸ್ ಕಮಿಷನರ್ ವರ್ಗಾಯಿಸಿ: ಪ್ರತಿಭಟನೆಯಲ್ಲಿ ಮುನೀರ್ ಕಾಟಿಪಳ್ಳ… ನಿಡುವಾಳೆ ಶ್ರೀ ರಾಮೇಶ್ವರ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ: ಬೆಳಗಿದ 3 ಸಾವಿರಕ್ಕೂ ಹೆಚ್ಚು…

ಇತ್ತೀಚಿನ ಸುದ್ದಿ

ಅಲರ್ಜಿಕ್ ರೈನೈಟಿಸ್ ಅಂದ್ರೆ ಏನು?: ಇದರಿಂದ ದೇಹದ ರಕ್ಷಣೆ ಮಾಡುವುದು

26/03/2022, 08:51

ಅಲರ್ಜಿಕ್ ರೈನೈಟಿಸ್

ಇತ್ತೀಚಿನ ದಿನಗಳಲ್ಲಿ ಅಲರ್ಜಿ ಸಮಸ್ಯೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತಿರುವ ಸಮಸ್ಯೆಯಾಗಿದೆ. ನಮ್ಮ ಸುತ್ತಲಿನ ಪರಿಸರ ಮಾಲಿನ್ಯ, ಒತ್ತಡ, ರೋಗ ನಿರೋಧಕ ಶಕ್ತಿಯ ಕೊರತೆ ಮುಂತಾದವುಗಳಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ.  ಅಲರ್ಜಿಕ್ ರೈನೈಟಿಸ್ ಇದು ಅಲರ್ಜಿಯ ಪ್ರತಿಕ್ರಿಯೆಯಾಗಿದೆ. ಕೆಲವೊಂದು ವಸ್ತುಗಳಿಗೆ ನಮ್ಮ ದೇಹವು ವಿರುದ್ಧವಾಗಿ ಪ್ರತಿಕ್ರಿಯಿಸಿ ತೊಂದರೆಯನ್ನು ಉಂಟುಮಾಡುತ್ತದೆ. ಇಂತಹ ವಸ್ತುಗಳನ್ನು ಅಲರ್ಜಿನ್ ಎಂದು ಕರೆಯಲಾಗುತ್ತದೆ. 

ಅಲರ್ಜಿಕ್ ರೈನೈಟಿಸ್ನಲ್ಲಿ 2 ವಿಧಗಳಿವೆ.

ಸೀಜನಲ್  (ಹೇ ಜ್ವರ):  ಹೂವಿನ ಪರಾಗ ಅಥವಾ ಸಣ್ಣ  ಕಣ್ಣಿಗೆ ಕಾಣದ ಬೀಜಗಳಿಂದಾಗಿ ಅಲರ್ಜಿ ಉಂಟಾಗುತ್ತದೆ. ರೋಗ ಲಕ್ಷಣಗಳು ಸಾಮಾನ್ಯವಾಗಿ ವಸಂತ ಋತು, ಬೇಸಿಗೆಯ ಕೊನೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ದೀರ್ಘಕಾಲಿಕ: ಧೂಳು, ಹುಳಗಳು, ಸಾಕು ಪ್ರಾಣಿಗಳ ಕೂದಲು ಅಥವಾ ತಲೆಹೊಟ್ಟು ಮುಂತಾದವುಗಳಿಂದ  ಅಲರ್ಜಿ ಉಂಟಾಗುತ್ತದೆ. ಇದರಲ್ಲಿ  ರೋಗಲಕ್ಷಣಗಳು ವರ್ಷಪೂರ್ತಿ ಕಾಣಿಸಿಕೊಳ್ಳುವ ಸಂಭವವಿರುತ್ತದೆ. ಕಾರಣಗಳು :

ದೇಹವು ಅಲರ್ಜಿ ಉಂಟುಮಾಡುವ ವಸ್ತುವಿನೊಂದಿಗೆ ಸಂಪರ್ಕಕ್ಕೆ ಬಂದಾಗ, ಅದು ಹಿಸ್ಟಮೈನ್ ಅನ್ನು ಬಿಡುಗಡೆ ಮಾಡುತ್ತದೆ. ಹಿಸ್ಟಮೈನ್ ಎಂದರೆ ನಮ್ಮ ದೇಹವನ್ನು ಅಲರ್ಜಿಯಿಂದ ರಕ್ಷಿಸುವ ಒಂದು ನೈಸರ್ಗಿಕ ರಾಸಾಯನಿಕವಾಗಿದೆ. ಇದು   ಶೀತ, ಸೀನು ಮತ್ತು ಕಣ್ಣುಗಳ ತುರಿಕೆ ಸೇರಿದಂತೆ ಇತರ ರೋಗಲಕ್ಷಣಗಳನ್ನು ಉಂಟುಮಾಡಬಹುದು.

ಯಾರಿಗೆಲ್ಲ ಬರಬಹುದು?:

ಕೌಟುಂಬಿಕ  ಇತಿಹಾಸ: ಅಲರ್ಜಿಕ್ ರೈನೈಟಿಸ್, ಆಸ್ತಮಾ, ಅಟೊಪಿಕ್ ಡರ್ಮಟೈಟಿಸ್ (Eczema) ನಂತಹ ಇತರ ಅಲರ್ಜಿಯ ಕೌಟುಂಬಿಕ  ಇತಿಹಾಸವನ್ನು ಹೊಂದಿರುವವರಲ್ಲಿ ಕಾಣಿಸಿಕೊಳ್ಳಬಹುದು. ಇದಷ್ಟೇ ಅಲ್ಲದೆ, ಮಕ್ಕಳ ಹತ್ತಿರ ಸಿಗರೇಟ್ ಸೇದುವುದು, ಗರ್ಭಿಣಿಯಾಗಿದ್ದಾಗ ತಾಯಿ ತಂಬಾಕು ಉತ್ಪನ್ನಗಳನ್ನು ಬಳಸಿದ್ದರೆ  ಮಕ್ಕಳಲ್ಲಿ ಅಲರ್ಜಿ ಉಂಟಾಗಬಹುದು.


ರೋಗಲಕ್ಷಣಗಳು ಏನು?

    ●ಮೂಗು, ಬಾಯಿ, ಕಣ್ಣು, ಗಂಟಲು, ಚರ್ಮದಲ್ಲಿ ತುರಿಕೆ.

    ●ವಾಸನೆ ಗ್ರಹಿಕೆಯಲ್ಲಿ ತೊಂದರೆ 

    ●ಶೀತ 

    ●ಸೀನು 

    ●ಕಣ್ಣಲ್ಲಿ ನೀರು ತುಂಬಿಕೊಳ್ಳುವುದು 

    ●ಉಸಿರುಗಟ್ಟಿದ ಅನುಭವ 

    ●ಕೆಮ್ಮು

    ●ಗಂಟಲು ಕೆರತ

    ●ಕಣ್ಣುಗಳ ಕೆಳಗೆ ಕಪ್ಪುವರ್ತೂಲಗಳು, ಹಾಗು ಪಫಿನೆಸ್

    ●ಆಯಾಸ ಮತ್ತು ಕಿರಿಕಿರಿ

    ●ತಲೆನೋವು

    ●ಅಲರ್ಜಿಕ್ ರೈನೈಟಿಸ್ ನಿಮ್ಮ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು.  

    ●ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದಲಲ್ಲಿ ಅಲರ್ಜಿಕ್ ರೈನೈಟಿಸ್ ಸಾಮಾನ್ಯವಾಗಿ ದೀರ್ಘಕಾಲದ ತೊಂದರೆಗಳನ್ನು ಉಂಟುಮಾಡಬಹುದು.

    ●ದೀರ್ಘಕಾಲದ ಮೂಗಿನ ಉರಿಯೂತ ಮತ್ತು ಅಡಚಣೆಯಾಗಿ ಉಸಿರಾಟಕ್ಕೆ ತೊಂದರೆಯಾಗುವುದು.

    ●ಸೈನುಟಿಸ್, ಕಿವಿಯ ಸೋಂಕಾಗಿ ಸೋರುವುದು, ನಿದ್ರಾ ಹೀನತೆ, ಶ್ವಾಸಕೋಶದ ಸೋಂಕು

    ●ಬಾಯಿಯಿಂದ ಉಸಿರಾಡುವುದರಿಂದ ಉಂಟಾಗುವ ಹಲ್ಲಿನ ಸಮಸ್ಯೆಗಳು,ಆಸ್ತಮಾ ಉಂಟಾಗುವ ಸಾಧ್ಯತೆ ಉಂಟಾಗುತ್ತದೆ.

ರೋಗನಿರ್ಣಯ ಮತ್ತು ಪರೀಕ್ಷೆ

ಸಾಮಾನ್ಯವಾಗಿ ರೋಗಲಕ್ಷಣ ಮತ್ತು ದೈಹಿಕ ಪರೀಕ್ಷೆ ಗಳಿಂದ ತೀರ್ಮಾನತೆಗೆದುಕೊಳ್ಳಲಾಗುತ್ತದೆ.

ಕೆಲವೊಂದು ಸಂದರ್ಭಗಳಲ್ಲಿ, 

ಚರ್ಮದ ಪರೀಕ್ಷೆ

ರಕ್ತ ಪರೀಕ್ಷೆ : ಇಮ್ಯುನೊಗ್ಲಾಬ್ಯುಲಿನ್ಗಳ ಮಟ್ಟದ ಪರೀಕ್ಷೆ 

ವಿರಳವಾಗಿ ಸೈನಸ್‌ಗಳ ಇಮೇಜಿಂಗ್ ಪರೀಕ್ಷೆ, ನಾಸಲ್ ಎಂಡೋಸ್ಕೋಪಿ,ಗಣಕೀಕೃತ ಟೊಮೊಗ್ರಫಿ (CT) ಸ್ಕ್ಯಾನ್ನಂತಹ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ 

ಚಿಕಿತ್ಸೆ:

ಮೊದಲನೆಯದಾಗಿ ಅಲರ್ಜಿಯನ್ನು (ಅಲರ್ಜಿನ್) ಪ್ರಚೋದಿಸುವ ವಸ್ತುಗಳೊಂದಿಗೆ ಸಂಪರ್ಕವನ್ನು ತಪ್ಪಿಸಬೇಕು.  ಅಲರ್ಜಿಕ್ ರಿನಿಟಿಸ್‌ಗೆ ಹೋಮಿಯೋಪತಿ ಚಿಕಿತ್ಸೆಯ ಮೂಲಕ   ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ವಿರುದ್ಧವಾಗಿ ಕೆಲಸಮಾಡುವುದನ್ನು ತಡೆಯುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗು ಅಲರ್ಜಿ ಉಂಟುಮಾಡುವ ವಸ್ತುಗಳಿಗೆ ದೇಹವು ನೈಸರ್ಗಿಕವಾಗಿ ಹೊಂದಿಕೊಂಡು ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತದೆ.

ಅಲರ್ಜಿಕ್ ರೈನೈಟಿಸ್ನಿಂದ ಹೇಗೆ  ರಕ್ಷಿಸಿಕೊಳ್ಳಬಹುದು?

    ●ಮಕ್ಕಳನ್ನು ಸಣ್ಣದಿರುವಾಗಿನಿಂದ ಪರಿಸರದ ವಿವಿಧ  ಅಂಶಗಳಿಗೆ ಒಡ್ಡಲು ಬಿಡುವಿದರಿಂದ ಅವರ ರೋಗ ನಿರೋಧಕ ಶಕ್ತಿ ನೈಸರ್ಗಿಕವಾಗಿ ಹೆಚ್ಚುವುದು ವಿವಿಧ ಅಧ್ಯಯನಗಳಿಂದ ತಿಳಿದುಬಂದಿದೆ.

    ●ಪ್ರಾಣಿಗಳನ್ನು ಮುಟ್ಟಿದ ನಂತರ ಕೈಗಳನ್ನು ತೊಳೆಯುವುದು.

    ●ಧೂಳು ಹೊಂದಿರದ ಹಾಸಿಗೆ ಮತ್ತು ಹೊದಿಕೆಗಳನ್ನು ಬಳಸುವುದು.

    ●ಕಣ್ಣುಗಳನ್ನು ಧೂಳಿನಿಂದ ರಕ್ಷಿಸಲು ಕನ್ನಡಕವನ್ನು ಧರಿಸುವುದು.

    ●ಏರೋಸಾಲ್ ಸ್ಪ್ರೇಗಳು,ವಾಯು ಮಾಲಿನ್ಯ,ಶೀತ ಹವಾಮಾನ,ಹೊಗೆ,ತಂಬಾಕು ಹೊಗೆ ಗಳಂತಹ ಮಾಲಿನ್ಯಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಇಂತಹ ಹಲವು ವಿಚಾರಗಳಿಂದ ತೊಂದರೆ ಉಂಟಾಗುವುದನ್ನು ತಡೆಗಟ್ಟಬಹುದು.

ಡಾ.ಭವ್ಯ ಶೆಟ್ಟಿ  BHMS, PGDND

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163  

ಇತ್ತೀಚಿನ ಸುದ್ದಿ

ಜಾಹೀರಾತು