6:16 AM Tuesday16 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಅಲಂಕಾರು: ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ, ಸನ್ಮಾನ ಸಮಾರಂಭ

23/06/2022, 12:07

ಉಪ್ಪಿನಂಗಡಿ(reporterkarnataka.com); ಅಲಂಕಾರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಜಯಶ್ರೀ ಎಸ್. ಜನಾರ್ಧನ ಗೌಡ.ಕೆ. ಹಾಗೂ ಕಮಲ ಕೆ. ಅವರು ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಶಾಲಾ ಶಿಕ್ಷಕರ ಹಾಗೂ ಎಸ್ಡಿಎಂಸಿ ಅವರು ಮತ್ತು ಪೋಷಕರ ವತಿಯಿಂದ ಅವರನ್ನು ಸನ್ಮಾನಿಸಿ,ಬೀಳ್ಕೊಡಲಾಯಿತು.

ಗೋಪಾಲಕೃಷ್ಣ ಪಡ್ಡಿಲಾಯ  (ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರು) ಮತ್ತು ಮುತ್ತಪ್ಪ ಪೂಜಾರಿ (ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸಿಎ ಬ್ಯಾಂಕ್ ಅಲಂಕಾರು) ಶ್ರೀ ರಾಮಕೃಷ್ಣ ಮಲ್ಲಾರ (ಅಧ್ಯಕ್ಷರು ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ) ಅವರು ಭಡ್ತಿಗೊಂಡ ಶಿಕ್ಷಕರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪದನಿಮಿತ್ತ SDMC ಸದಸ್ಯರು  ರವಿ ಪೂಜಾರಿ, ಪ್ರಕಾಶ್ ಬಿ.(ಅಲಂಕಾರು ಕ್ಲಸ್ಟರ್  ಸಮೂಹ ಸಂಪನ್ಮೂಲ ವ್ಯಕ್ತಿ) ಉಪಸ್ಥಿತರಿದ್ದರು.ಎಸ್ಡಿಎಂಸಿ ಅಧ್ಯಕ್ಷರ ದಯಾನಂದ ಕರ್ಕೇರ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. 

ನಿಂಗರಾಜು ಕೆ.ಪಿ., ಎಸ್ಡಿಎಂಸಿ ಸದಸ್ಯರಾದ ಅಬುಬಕರ್ ನಕ್ಕರೆ, ದಿನೇಶ್ ದೇವಾಡಿಗ ಹರೀಶ್ ಗೌಡ ನೆಕ್ಕರೆ, ವಿನುತಾ, ಸೌಮ್ಯ, ಕಮಲ,ಮೋಹಿನಿ, ವಿಜಯಲಕ್ಷ್ಮಿ , ನಸೀಮಾ, ಶಿಕ್ಷಕರಾದ ವನಜ, ವಿಶ್ವ ನಾಯ್ಕ, ಅತಿಥಿ ಶಿಕ್ಷಕರಾದ ವನಿತಾ, ಪ್ರತಿಮಾ, ರೋಶನಿ ಹಾಗೂ ಗೌರವ ಶಿಕ್ಷಕರಾದ ಜ್ಯೋತಿ,  ರಮ್ಯ, ಅಖಿಲ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಅಶ್ವಿನಿ ಕುಮಾರಿ, ವಾಣಿಶ್ರೀ ಮುಂತಾದವರು ಭಾಗಿಯಾಗಿದ್ದರು. ಮುಖ್ಯಗುರುಗಳು ನಿಂಗರಾಜು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಪ್ರಭಾ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು