3:42 PM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಅಕ್ಷಯ ತೃತೀಯ: ಮಂಗಳೂರು ನಗರದಲ್ಲೇ 50 ಕೋಟಿ ರೂ. ಮೌಲ್ಯದ ಚಿನ್ನ ಖರೀದಿ!!; ಕಳೆದ ವರ್ಷಕ್ಕಿಂತ ಶೇ.35ರಷ್ಟು ಹೆಚ್ಚಳ

04/05/2022, 19:31

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಕರಾವಳಿ ಜಿಲ್ಲೆಗಳಲ್ಲಿ ಭಾರೀ ಚಿನ್ನ ಖರೀದಿಯೊಂದಿಗೆ ಅಕ್ಷಯ ತೃತೀಯ ಸಂಪನ್ನಗೊಂಡಿದೆ. ಮಂಗಳೂರು ನಗರದಲ್ಲೇ ಸುಮಾರು 50 ಕೋಟಿ ರೂ. ಮೌಲ್ಯದ ಚಿನ್ನ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 35ರಷ್ಟು ಏರಿಕೆಯಾಗಿದೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದರೆ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಈ ಹಿನ್ನೆಲೆಯಲ್ಲೇ ಬಡವರು ಮೂಗು ಬೊಟ್ಟು ಖರೀದಿಸಿ ಸಂಪತ್ತು ವೃದ್ಧಿಯಾಗಲಿ ಎಂದು ದೇವರಲ್ಲಿ ಬೇಡಿಕೊಂಡರೆ, ಮೆಷಿನ್ ಇಟ್ಟು ನೋಟು ಎಣಿಸುವವರು, ಭ್ರಷ್ಟಾಚಾರ, ಲಂಚಾವತಾರ, ಕಮಿಷನ್ ನಿಂದ ಹಣ ಮಾಡಿದ ದೊರೆಗಳು ಕೆಜಿಗಟ್ಟಲೆ ಬಂಗಾರ ಖರೀದಿಸಿ ಮತ್ತಷ್ಟು ಸಂಪತ್ತು ವೃದ್ಧಿಗೆ ಮತ್ತೆ ದೇವರ ಮೊರೆ ಹೋಗುತ್ತಾರೆ. ಆದ್ದರಿಂದಲೇ ಮಂಗಳೂರು ನಗರವೊಂದರಲ್ಲೇ ಸುಮಾರು 50 ಕೋಟಿ ರೂ. ಮೌಲ್ಯದ ಚಿನ್ನವನ್ನು ಗ್ರಾಹಕರು ಖರೀದಿಸಿದ್ದಾರೆ. ಮಲಬಾರ್, ಅಲುಕಾಸ್, ತನಿಷ್ಕಾದಂತಹ ದೊಡ್ಡ ಜುವೆಲ್ಲರಿ ಶಾಪ್ ಮಾತ್ರವಲ್ಲದೆ ಸಣ್ಣ ಅಂಗಡಿಗಳಿಂದಲೂ ಚಿನ್ನ ಖರೀದಿಯಾಗಿದೆ. ಅಕ್ಷಯ ತೃತೀಯ ಮತ್ತು ಅದರ ಹಿಂದಿನ ದಿನ ಸೇರಿ ಒಟ್ಟು 50 ಕೋಟಿ ರೂ.ಗಳ ವ್ಯವಹಾರ ನಡೆದಿದೆ. 

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಿನ್ನ ಖರೀದಿಯಲ್ಲಿ ಶೇ. 35ರಷ್ಟು ಏರಿಕೆಯಾಗಿದೆ ಎಂದು ಸೌತ್ ಕೆನರಾ ಜುವೆಲ್ಲರ್ಸ್ ಅಸೋಸಿಯೇಷನ್ 

ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಶೇಟ್ ಅವರು ರಿಪೋರ್ಟರ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಹಳದಿ ಲೋಹಕ್ಕೆ ಬಹಳಷ್ಟು ಮಹತ್ವ ಇದೆ. ಭಾರತೀಯ ಮಹಿಳೆಯರಿಗೆ ಚಿನ್ನದ ಹುಚ್ಚು ಜಾಸ್ತಿ. ಚಿನ್ನಕ್ಕಾಗಿ ಡೈವೋರ್ಸ್ ಆದ ಘಟನೆಗಳು ಕೂಡ ಇದೆ. 

ಚಿನ್ನವನ್ನು’ ನ್ಯೂಟ್ರಲ್ ಕರೆನ್ಸಿ’ ಎಂದೇ ಪರಿಗಣಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿರುವ ಚಿನ್ನದ ಮೌಲ್ಯದ ಮೇಲೆ ನೋಟು ಮುದ್ರಿಸುತ್ತದೆ. ಚಿನ್ನದ ರೇಟ್ ಹೆಚ್ಚಾದಾಗ  ಆರ್ ಬಿಐ ಬಂಗಾರ ಮಾರುತ್ತದೆ. ಹಾಗೆ ಮತ್ತೆ ಖರೀದಿಸಿ ಸಮತೋಲವನ್ನು ಕಾಪಾಡುತ್ತದೆ. ಸಾಮಾನ್ಯವಾಗಿ ಡಾಲರ್ ಮೌಲ್ಯ ಕುಸಿದಾಗ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಡಾಲರ್ ಮೌಲ್ಯ ಏರಿಕೆಯಾದಾಗ ಚಿನ್ನದ ಬೆಲೆ ಕುಸಿಯುತ್ತದೆ. ಪ್ರಸ್ತುತ ಒಂದು ಗ್ರಾಮ್ ಚಿನ್ನಕ್ಕೆ 5300 ರೂ. ಬೆಲೆ ಇದೆ. ವಿಶೇಷವೆಂದರೆ ರಾಜ್ಯದಲ್ಲಿ ನೆಲೆಸಿರುವ ಧರ್ಮ ಸಂಘರ್ಷ ಚಿನ್ನ ಖರೀದಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. 

ಇತ್ತೀಚಿನ ಸುದ್ದಿ

ಜಾಹೀರಾತು