ಇತ್ತೀಚಿನ ಸುದ್ದಿ
ಅಕ್ಷರಸ್ಥರನ್ನು ಹೆಚ್ಚು ಮಾಡುವ ಮುಖಾಂತರ ದೇಶದ ಅಭಿವೃದ್ಧಿ ಜತೆ ವಿದ್ಯಾರ್ಥಿಗಳು ಕೈಜೋಡಿಸಲಿ: ಡಾ. ವೆಂಕಟೇಶ್
21/09/2021, 12:21
ದೇವಲಾಪುರ ಜಗದೀಶ್ ನಾಗಮಂಗಲ ಮಂಡ್ಯ
info.reporterkarnataka@gmail.com
ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದ್ದು ಅಕ್ಷರಸ್ಥರ ಸಂಖ್ಯೆ ಯನ್ನು ಹೆಚ್ಚು ಮಾಡುವ ಮುಖಾಂತರ ಅನಕ್ಷರಸ್ಥರ ಮುಕ್ತ ಭಾರತ ಮಾಡಲು ಇಂದಿನ ವಿದ್ಯಾರ್ಥಿಗಳು ಮುಂದಾಗಬೇಕೆಂದು ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ. ವೆಂಕಟೇಶ್ ಕರೆ ನೀಡಿದರು
ನಾಗಮಂಗಲ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅನಕ್ಷರರ ಪ್ರಮಾಣ ಹೆಚ್ಚಿದ್ದು ಅದನ್ನು ಕಡಿಮೆ ಮಾಡಿ ದೇಶದ ಅಭಿವೃದ್ಧಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಪ್ರಪಂಚದಲ್ಲಿ ಅನಕ್ಷರರ ಉಳಿಕೆ ಭಾರತದಲ್ಲಿ ಮಾತ್ರ ಎಂದು ಬೆರಳುಮಾಡಿ ತೋರುವ ಸ್ಥಿತಿ ದೂರ ಮಾಡುವ ಮುಖಾಂತರ ನೀವುಗಳು ನಿಮ್ಮ ನಿಮ್ಮ ಬಳಿ ಇರುವ ಅನಕ್ಷರಸ್ಥರ ಬಗ್ಗೆ ತಿಳುವಳಿಕೆ ನೀಡುವ ಮುಖಾಂತರ ಅಕ್ಷರಸ್ಥರನ್ನಾಗಿ ಮಾಡುವಂತೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ರೂಕ್ಸಾನ ಕೌಸರ್ ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಮು, ಬ್ಯಾಂಕ್ ಆಫ್ ಬರೋಡೊ
ಸಂಯೋಜಕರಾದ ಸಾರಥಿ ನಾಗರಾಜು, ದೈಹಿಕ ಶಿಕ್ಷಣ ಅಧಿಕಾರಿ ಶಿವಣ್ಣಗೌಡರು ಉಪಸ್ಥಿತರಿದ್ದು,
ಕಾರ್ಯಕ್ರಮ ಸಹಾಯಕರಾದ ದಿವ್ಯ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲರಾದ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಸಾಕ್ಷರತಾ ಸಂಯೋಜಕರಾದ ಕೃಷ್ಣ ವಂದಿಸಿದರು. ಶ್ರೀನಿವಾಸ್ ಸ್ವಾಗತಿಸಿದರು.