ಇತ್ತೀಚಿನ ಸುದ್ದಿ
ಅಕ್ರಮ ಭೂಕಬಳಿಕೆ ತೆರವುಗೊಳಿಸದ ಕಂದಾಯ ಇಲಾಖೆ: ಬಾಳೂರು ಗ್ರಾಮಸ್ಥರಿಂದ ಅನಿರ್ಧಿಷ್ಟ ಪ್ರತಿಭಟನೆ
22/09/2023, 20:21

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಸಮೀಪದ ಬಾಳೂರು ಗ್ರಾ.ಪಂ.ವ್ಯಾಪ್ತಿಯ ದರ್ಬಾರ್ ಪೇಟೆಯಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು 22 ಗುಂಟೆ ಜಾಗ ಮಂಜೂರಾಗಿದ್ದರೂ ಖಾಸಗಿ ವ್ಯಕ್ತಿಯೋರ್ವರು ಈ ಜಾಗವನ್ನು ಆಕ್ರಮಿಸಿರುವುದರಿಂದ ಅಂಗನವಾಡಿ ಕಟ್ಟಡ ಕಟ್ಟಲು ಬೇಲಿ ಹಾಕಿರುವ ಹಿನ್ನಲೆಯಲ್ಲಿ ಸಾಧ್ಯವಾಗುತ್ತಿಲ್ಲ. ಕಂದಾಯ ಅಧಿಕಾರಿಗಳು ಈ ಅಕ್ರಮ ಜಾಗವನ್ನು ತೆರವುಗೊಳಿಸಿಲ್ಲ ಎಂದು ವಿರೋಧಿಸಿ ಬಾಳೂರಿನಲ್ಲಿ ಗ್ರಾಮಸ್ಥರು ಅನಿರ್ದಿಷ್ಟ ಅವಧಿ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಬಾಳೂರು ಗ್ರಾ.ಪಂ.ಅಧ್ಯಕ್ಷ ಬಿ.ಬಿ.ಮಂಜುನಾಥ್ ಮಾತನಾಡಿ ‘ಅಂಗನವಾಡಿ ಕಟ್ಟಡ ಕಟ್ಟಲು ಹಣ ಮಂಜೂರಾಗಿದೆ.ಆದರೆ ಈ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಒತ್ತುವರಿ ಮಾಡಿದ್ದು ಅದನ್ನು ಬಿಡಿಸಿ ಕೊಡಲು ತಾಲ್ಲೂಕು ಆಡಳಿತ ಮೀನಮೇಷ ಎಣಿಸುತ್ತಿದೆ. ಜಾಗ ಸಿಗುವವರೆಗೂ ನಿರಂತರ ಪ್ರತಿಭಟನೆ ಮಾಡುತ್ತೇವೆ. ಗ್ರಾಮಸ್ಥರೊಂದಿಗೆ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಕಂದಾಯ ಅಧಿಕಾರಿಗಳು ಶೀಘ್ರವೇ ಜಾಗ ತೆರವುಗೊಳಿಸಿ ಅಂಗನವಾಡಿ ಕಟ್ಟಡ ಕಟ್ಟಲು ಸ್ಪಂದಿಸಬೇಕು. ಇಲ್ಲವಾದರೆ ಬೇಡಿಕೆ ಈಡೇರುವವರೆಗೂ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಗೀತಾ, ಸದಸ್ಯರಾದ ಮನೋಜ್ , ಜಯಶ್ರೀ ಪ್ರಕಾಶ್ ಗ್ರಾಮಸ್ಥರಾದ ರಘುಪತಿ, ಜಗದೀಶ್, ಪ್ರಭಾಕರ್, ಸಂದೀಪ್, ಮದನ್, ರಮೇಶ್ ,ಅವಿನಾಶ್, ಕೇಶವ, ವೆಂಕಟೇಶ್ , ಪ್ರಮೀಳಾ, ಜ್ಯೋತಿ,ನಳಿನಿ ಹಾಗೂ ಊರಿನ ಎಲ್ಲ ಪ್ರಮುಖರು,ಮಹಿಳಾ ಸಂಘದ ಎಲ್ಲಾ ಸದಸ್ಯರು ಇದ್ದರು.