ಇತ್ತೀಚಿನ ಸುದ್ದಿ
ಅಗುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆ ಪ್ರತ್ಯಕ್ಷ; ಬರ್ಕಣ ಜಲಪಾತ ಪ್ರವಾಸಿಗರಿಗೆ ಜಾಗ್ರತೆ ವಹಿಸಲು ಸೂಚನೆ
06/09/2022, 20:05
ಕಾರ್ಕಳ(reporterkarnataka.com): ಆಗುಂಬೆ ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಆನೆಯೊಂದು ಪ್ರತ್ಯಕ್ಷ ವಾಗಿದ್ದು ಆಗುಂಬೆ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಪ್ರಯಾಣಿಕರು ಸ್ವಲ್ಪ ಹೊತ್ತು ಆತಂಕಕ್ಕೀಡಾದರು.
ಪ್ರತಿ ವರ್ಷದ ಮಳೆಗಾಲದಲ್ಲಿ ಅನೆಯೊಂದು ಅಹಾರ ಅರಸಿಕೊಂಡು ಅಗುಂಬೆಯತ್ತ ಬರುತ್ತಿದ್ದು ಯಾವುದೇ ಹಾನಿಮಾಡದೆ ಮಲ್ಲಂದೂರು ತಲ್ಲೂರು ನಾಕೂರು ಕಾಡಿನಲ್ಲಿ ಸಂಚರಿಸುತ್ತದೆ . ಮಳೆಗಾಲ ಮುಗಿದ ಬಳಿಕ ಮತ್ತೆ ಕೆರೆಕಟ್ಟೆ ಮಾಳ ನಾರಾವಿಯತ್ತ ಸಾಗಿ ಹಿಂತಿರುಗುತ್ತದೆ. ಬರ್ಕಣ ಜೋಗಿಗುಂಡಿ ಜಲಪಾತ ವೀಕ್ಷಿಸಲು ಅಗಮಿಸುವ ಪ್ರವಾಸಿಗರು ಅರಣ್ಯಾಧಿಕಾರಿಗಳ ಮಾಹಿತಿ ಪಡೆದು ಸಾಗುವುದು ಒಳಿತು.
ಅಗುಂಬೆ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರು ಜಾಗೃತೆ ವಹಿಸಬೇಕು.ಪ್ರಾಣಿಗಳಿಗೆ ಹಾನಿಯಾಗಬಾರದು . ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಆನೆಯ ಚಲನವಲನಗಳ ಮಾಹಿತಿ ನೀಡಿ ಜಲಪಾತ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ. ಮಲ್ಲಂದೂರು ಸಮೀಪದಲ್ಲಿ ಆನೆಯ ಚಲನವಲನಗಳಿದ್ದರೆ ಜಲಪಾತ ವೀಕ್ಷಣೆ ತಾತ್ಕಾಲಿಕ ಬಂದ್ ಮಾಡಲಾಗುತ್ತದೆ. ಅರಣ್ಯಾಧಿಕಾರಿ ಗಳು ,ಅರಣ್ಯ ವೀಕ್ಷಕರ ಸೂಚನೆಗಳನ್ನು ಪಾಲಿಸಬೇಕು.