6:18 AM Tuesday7 - January 2025
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ ಎಲ್ಲ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಇಂಧನ ಸಚಿವ… ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮೂಡಿಗೆರೆ: ಹುಲಿ ದಾಳಿಗೆ ಬಾಣಂತಿ ಹಸು ಬಲಿ; ಕರುವಿನ ಆಕ್ರಂಧನ ಬೆಂಗಳೂರು: 22ನೇ ಚಿತ್ರಸಂತೆ ಉದ್ಘಾಟನೆ; ಕಲಾಕೃತಿ ಕೊಂಡು ಕಲಾವಿದರ ಬೆಂಬಲಿಸಲು ಮುಖ್ಯಮಂತ್ರಿ ಕರೆ ವಿರೋಧ ಪಕ್ಷ ಆರೋಪ ಮಾಡಿದರೆ ಸಾಬೀತು ಮಾಡಬೇಕು: ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಇಡಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಲೂಟಿ: ಕಠಿಣ… ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನ ವಿನಿಯೋಗ: ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ…

ಇತ್ತೀಚಿನ ಸುದ್ದಿ

ಆಗಸದಲ್ಲಿ ಚಂದ್ರನ ಹುಡುಕುತ್ತಿದ್ದವರಿಗೆ ಕಾಣಿಸಿದ್ದು ಬೆಂಕಿಯ ಜ್ವಾಲೆ!:  ಏನಿದು ಜಲ್ವಿಸುತ್ತಾ ಹಾದು ಹೋಗಿದ್ದು?.!!

03/04/2022, 12:17

ಮಂಗಳೂರು(reporterkarnataka.com) ದೇಶದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಇದರ ನಡುವೆ ಮಹಾರಾಷ್ಟ್ರದ ಬಹುತೇಕ ಜಿಲ್ಲೆಗಳಲ್ಲಿ ಬೆಂಕಿಯ ಜ್ವಾಲೆಯೊಂದು ಸುಮಾರು ಹೊತ್ತು ಆಕಾಶದಲ್ಲಿ ಸಾಗಿದೆ.ಇದನ್ನ ಕಂಡವರು ಧೂಮಕೇತು ಇರಬೇಕು, ಹಬ್ಬದ ದಿನ ಅನಿಷ್ಟ ಕಂಡಂತಾಯ್ತು ಎಂಬಂತೆ ಮಾತನಾಡಿಕೊಂಡಿದ್ದಾರೆ.

ಬಳಿಕ ಅದು ಉಲ್ಕಾಪಾತ ಎಂದು ಹೇಳುವಂತಹ ಮಾತುಗಳು ಆರಂಭವಾಗಿದೆ. ಆದರೆ ಉಲ್ಕಾಪಾತದ ಬಣ್ಣ ಈ ರೀತಿಯಲ್ಲಿ ಇರುವುದಿಲ್ಲ ಎಂಬ ವಾದಗಳಿವೆ.

ಮಹಾರಾಷ್ಟ್ರ ಮಧ್ಯಪ್ರದೇಶದ ಭಾಗಗಳಲ್ಲಿ ಈ ಬೆಂಕಿ ವಿಸ್ಮಯ ಕಂಡು ಬಂದಿದೆ. ವಿಶೇಷ ಅಂದರೆ ತೀರಾ ಹತ್ತಿರದಲ್ಲಿ ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಇನ್ನೂ ಖಗೋಳ ಶಾಸ್ತ್ರಜ್ಞರ ಪ್ರಕಾರ ಇದು ಉಲ್ಕಾಪಾತವಾಗಿರದೇ ಚೈನಾ 2021 ರಲ್ಲಿ ಆಕಾಶಕ್ಕೆ ಹಾರಿಬಿಟ್ಟ ರಾಕೆಟ್​ನ ಅವಶೇಷಗಳು ಆಗಿರಬಹುದು ಎನ್ನಲಾಗುತ್ತಿದೆ.

ಮತ್ತೆ ಕೆಲವರು ಯಾವುದೋ ರಾಷ್ಟ್ರದ ಸ್ಯಾಟಲೈಟ್ ಭೂಕ್ಷಕ್ಷೆಗೆ ಬಂದು, ಉರುಳುತ್ತಿರುವ ದೃಶ್ಯ ಇದಾಗಿರಬಹುದು ಎನ್ನಲಾಗುತ್ತಿದೆ.

ಇನ್ನೂ ಇದಕ್ಕೆ ಸಂಬಂಧಿಸಿದಂತೆ ಇದು ರಾಕೆಟ್ ಒಂದರ ಅವಶೇಷವಾಗಿದ್ದು, ಇದು ನೆಲಕ್ಕೆ ಬಿದ್ದು ಉಳಿದ ಪಾರ್ಟ್​ಗಳನ್ನ ಸ್ಥಳೀಯವಾಗಿ ನೋಡಿದವರು ಇದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು