11:32 PM Saturday5 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಅಡಿಕೆ ಮಾರುಕಟ್ಟೆಯಲ್ಲಿ ಏರುಪೇರು: ಧಾರಣೆಯಲ್ಲಿ ಏರಿಳಿತ; ತಿಂಗಳಲ್ಲಿ 40 ರೂ. ಇಳಿಕೆ

10/06/2022, 16:57

ಸುಳ್ಯ(reporterkarnataka.com): ಸುಮಾರು 2 ವರ್ಷಗಳಿಂದ ಉತ್ತಮ ಧಾರಣೆ ಹೊಂದಿದ್ದ ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ತಿಂಗಳ ಅವಧಿಯಲ್ಲಿ ಅಡಿಕೆ ಬೆಲೆಯಲ್ಲಿ ಸುಮಾರು 40 ರೂ. ಇಳಿಕೆ ಕಂಡಿದೆ.

ಇಷ್ಟು ಸಮಯ ಉತ್ತಮ ಧಾರಣೆ ಇದ್ದು ಈಗ ಅಡಿಕೆ ಒಣಗಿಸಿ, ಸುಲಿದು ಮಾರಾಟ ಮಾಡುವ ಸಂದರ್ಭದಲ್ಲಿ ಧಾರಣೆ ಕುಸಿತ ಆಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿ ನಷ್ಟ ಅನುಭವಿಸುವಂತಾಗಿದೆ ಎಂಬುದು ಕೃಷಿಕರ ನೋವು. ಹೊಸ ಅಡಿಕೆಯ ದರ ಸುಳ್ಯದಲ್ಲಿ ಕೆಜಿಗೆ 400 ರೂ.ಆಸುಪಾಸಿನಲ್ಲಿದೆ. ಕಳೆದ ತಿಂಗಳು 435-440 ರೂ. ವರೆಗೆ ಇದ್ದ ಅಡಿಕೆ ದರ ರೂ.ಈಗ 400-410ಕ್ಕೆ ಇಳಿದಿದೆ. ತಿಂಗಳಲ್ಲಿ ಹೆಚ್ಚು ಕಮ್ಮಿ 40 ರೂಗಳಷ್ಟು ಇಳಿಕೆ ಕಂಡಿದೆ. ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಜೂ.9ರಂದು ಹೊಸ ಅಡಿಕೆಗೆ ಕೆಜಿಗೆ ರೂ.400 ರಿಂದ 415ರ ವರೆಗೆ ಇತ್ತು. ಹಳೆಯ ಅಡಿಕೆಗೆ ಕೆಜಿಗೆ 540 ರೂ ಇತ್ತು. ಸುಳ್ಯ ನಗರದ ಇತರ ವ್ಯಾಪಾರಸ್ಥರಲ್ಲಿ 400 ರಿಂದ 410ರವರೆಗೆ ದರ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಅಡಿಕೆಯ ಗುಣಮಟ್ಟ ಅನುಸರಿಸಿ ಮತ್ತಷ್ಟು ಏರುಪೇರು ಸಂಭವಿಸುತ್ತದೆ. ಹೊಸ ಅಡಿಕೆ‌ ಮಾತ್ರ ಈಗ ಮಾರುಕಟ್ಟೆಗೆ ಬರುತ್ತದೆ. ಹಳೆ ಅಡಿಕೆ ಅಸ್ಟಾಗಿ ಮಾರುಕಟ್ಟೆಗೆ ಬರುತ್ತಿಲ್ಲ. ಈ ವರ್ಷ ಒಣಗಿಸಿ ಸುಲಿದ ಅಡಿಕೆ‌ ಸಾಮಾನ್ಯವಾಗಿ ಈ ಅವಧಿಯಲ್ಲಿ ಮಾರುಕಟ್ಟೆಗೆ ಬರುತಿದೆ. ಇತ್ತೀಚಿನ ಕೆಲವು ದಿನಗಳಲ್ಲಿ ಅಡಿಕೆ ಧಾರಣೆಯ ಏರಳಿತದಿಂದಾಗಿ ಅಡಿಕೆ ಈಗ ಮಾರಾಟ ಮಾಡಬೇಕೋ ಸ್ವಲ್ಪ ದಿನ ಕಾಯಬೇಕೋ ಎಂಬ ಗೊಂದಲ ಕೃಷಿಕರಲ್ಲಿದೆ. ಖಾಸಗೀ ವ್ಯಾಪಾರಿಗಳು ಕೂಡ ಹೆಚ್ಚು ಅಡಿಕೆ ಖರೀದಿಸಿ ಶೇಖರಿಸುವುದರಲ್ಲಿ ಆಸಕ್ತರಾಗಿಲ್ಲ ಎಂಬುದು ಮಾರುಕಟ್ಟೆಯ 

ವರದಿ. ಆದರೆ ಎಪ್ರಿಲ್, ಮೇ ತಿಂಗಳಲ್ಲಿ ಹೆಚ್ಚು ಮಳೆ ಸುರಿದ ಕಾರಣ ಅಡಿಕೆ ಒದ್ದೆಯಾಗಿದ್ದು ಅದನ್ನು ಒಣಗಿಸಿ ಶೇಖರಿಸಿ ಇಡುವುದು ಕಷ್ಟ. ಆದುದರಿಂದ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಕೃಷಿಕರು. ಶ್ರೀಲಂಕಾ, ಮ್ಯಾನ್ಮಾರ್, ಬರ್ಮ ಮತ್ತಿತರ ದೇಶಗಳಿಂದ ಅಡಿಕೆ ಆಮದಾಗುತ್ತಿರುವ ಕಾರಣ ಅಡಿಕೆ ದರ ಕುಸಿಯಲು ಕಾರಣ ಎಂದು ಹೇಳಲಾಗುತಿದೆ.

ಅಡಿಕೆ ಮಾರುಕಟ್ಟೆಗೆ ಬರುವುದು ಈಗ ಸ್ವಲ್ಪ ಕಡಿಮೆ ಆಗಿದೆ ಎನ್ನುತ್ತಾರೆ ಸುಳ್ಯ ನಗರದ ಪ್ರಮುಖ ಅಡಿಕೆ ವ್ಯಾಪಾರಸ್ಥರಾದ ಆದಂ ಕುಂಞಿ ಕಮ್ಮಾಡಿಯವರು. ಉತ್ತರ ಭಾರತದ ರಾಜ್ಯಗಳಿಂದ ಅಡಿಕೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಅಡಿಕೆ ಖರೀದಿಸಿದರೂ ಅಸ್ಟಾಗಿ ಹೋಗುವುದಿಲ್ಲ ಎನ್ನುತ್ತಾರವರು. ವಿದೇಶದಿಂದ ಅಡಿಕೆ ಆಮದಾಗುವ ಕಾರಣ ನಮ್ಮ ಅಡಿಕೆಗೆ ಬೇಡಿಕೆ ಕಡಿಮೆಯಾಗಿ ದರ ಕುಸಿಯಲು ಕಾರಣವಾಗುತಿದೆ. ಆದುದರಿಂದ ಈ ಭಾಗದ ಸಚಿವರುಗಳು, ಸಂಸದರುಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಆಮದು ಸುಂಕ ಹೆಚ್ಚಿಸುವುದು ಮತ್ತಿತರ ಕ್ರಮ ಕೈಗೊಂಡು ವಿದೇಶದಿಂದ ಅಡಿಕೆ‌ ಬರುವುದಕ್ಕೆ ಕಡಿವಾಣ ಹಾಕಿದರೆ ಅಡಿಕೆಯ ಬೇಡಿಕೆ ಹೆಚ್ಚಿ ದರ ಏರಬಹುದು ಎನ್ನುತ್ತಾರೆ ಎಪಿಎಂಸಿಯ ಮಾಜಿ ನಿರ್ದೇಶಕರೂ ಆದ ಆದಂ‌ ಕುಂಞಿ ಕಮ್ಮಾಡಿಯವರು.

ಕ್ಯಾಂಪ್ಕೋಗೆ ಅಡಿಕೆ ಬರುವುದರಲ್ಲಿ ಅಸ್ಟೇನು ಕಡಿಮೆಯಾಗಿಲ್ಲ, ಕ್ಯಾಂಪ್ಕೋ ಸಂಸ್ಥೆಯ ಸುಳ್ಯ ಶಾಖೆ‌ ಮತ್ತು ವಿವಿಧ ಉಪ ಶಾಖೆಗಳ ಮೂಲಕ ಪ್ರತಿ ದಿನ ಸರಾಸರಿ 100 ಕ್ವಿಂಟಲ್ ಅಡಿಕೆ ಖರೀದಿಸಲಾಗುತ್ತದೆ ಎನ್ನುತ್ತಾರೆ ಕ್ಯಾಂಪ್ಕೋ ಸಂಸ್ಥೆಯ ಸುಳ್ಯ ವ್ಯವಸ್ಥಾಪಕರಾದ ಪ್ರದೀಪ್. ಕ್ಯಾಂಪ್ಕೋ ಉತ್ತಮ ಬೆಲೆ ನೀಡಿ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಎಲ್ಲಾ ಪ್ರಯತ್ನ ನಡೆಸುತಿದೆ.ಇದೀಗ ಒಂದೆರಡು ದಿನಗಳಿಂದ ಮತ್ತೆ ನಿಧಾನಕ್ಕೆ ಮಾರುಕಟ್ಟೆ ಸ್ಥಿರವಾಗುತ್ತಿದ್ದು ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯ ಇಲ್ಲ.ಕೆಲವು ದಿನಗಳಲ್ಲಿ ಮತ್ತೆ ದರ ಏರುವ ನಿರೀಕ್ಷೆ ಇದೆ ಎನ್ನುತ್ತಾರೆ ಪ್ರದೀಪ್.

ಇತ್ತೀಚಿನ ಸುದ್ದಿ

ಜಾಹೀರಾತು