ಇತ್ತೀಚಿನ ಸುದ್ದಿ
ಅಧಿಕಾರಸ್ಥರೇ ಇನ್ನಾದೂ ಕಣ್ಣು ಬಿಡಿ: ರಸ್ತೆ ಇಲ್ಲದ ಕಲ್ಕೋಡಿನಲ್ಲಿ ರೋಗಿಗಳನ್ನು ಸಾಗಿಸುವುದು ಜೋಳಿಗೆಯಲ್ಲಿ!!
12/07/2023, 20:10

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಇದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಕೋಡು ಗ್ರಾಮದ ಜನರ ಪಾಡು. ಯಾರಿಗಾದರೂ ಹುಷಾರಿಲ್ಲದಿದ್ದರೆ ರಸ್ತೆ ಸಂಪರ್ಕವಿಲ್ಲದ ಈ ಗ್ರಾಮದಿಂದ ಅನಾರೋಗ್ಯಪೀಡಿತರನ್ನು ಜೋಳಿಗೆಯಲ್ಲಿ ಕಟ್ಟಿ 1 ಕಿಮೀ. ದೂರದ ಕಳಸ ಪೇಟೆಗೆ ಕರೆದುಕೊಂಡು ಹೋಗಬೇಕು. ಇದೀಗ ಅನಾರೋಗ್ಯಪೀಡಿತ 70ರ ಹರೆಯದ ಶೇಷಮ್ಮ ಅವರನ್ನು ಜೋಳಿಗೆಯಲ್ಲಿ ಕಟ್ಟಿ ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಿದ ಯಶೋಗಾಥೆ ಇಲ್ಲಿದೆ.
ಕಳಸ ತಾಲೂಕಿನ ಕಲ್ಕೋಡು ಗ್ರಾಮದಲ್ಲಿ 70 ವರ್ಷದ ಶೇಷಮ್ಮರನ್ನ ಜೋಳಿಗೆಯಲ್ಲಿ ಕುಟುಂಬಸ್ಥರು ಕಟ್ಟಿ ಸುಮಾರು 1 ಕಿಮೀ ಉದ್ದದ ದುರ್ಗಮ ಪ್ರದೇಶವನ್ನು ಕ್ರಮಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಲ್ಕೋಡು ಗ್ರಾಮದಿಂದ ಕಳಸ ತಾಲೂಕಿಗೆ ಬರಬೇಕು ಅಂದ್ರೆ 4 ಕಿ.ಮೀ. ಆಗುತ್ತದೆ. ಕುದುರೆಮುಖ ಮೂಲಕ ಸುತ್ತಿಬರಲು 8 ಕಿ.ಮೀ. ಆಗುತ್ತದೆ. ಮುಕ್ಕಾಲು ಕಿ.ಮೀ. ಬಂದ್ರೆ ಆಟೋ ಸಿಗುತ್ತದೆ. ಆದ್ರೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಧಿಕಾರಿಗಳು ರಸ್ತೆ ಬಿಡ್ತಿಲ್ಲ.
ರಸ್ತೆ ಇಲ್ಲದ ಕಾರಣ ರೋಗಿಯನ್ನ ಸುಮಾರು 1 ಕಿ.ಮೀ. ಜೋಳಿಗೆಯಲ್ಲಿ ತಂದ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸುತ್ತಾರೆ. ಮುಕ್ಕಾಲು ಕಿ.ಮೀ. ರಸ್ತೆಗಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು, ಜನನಾಯಕರು ಯಾರೂ ಸ್ಪಂದಿಸಿಲ್ಲ. ಕಲ್ಕೋಡು ಗ್ರಾಮ 10 ಮನೆ, 30-40 ಜನಸಂಖ್ಯೆ ಇರುವ ಕಾಡಂಚಿನ ಕುಗ್ರಾಮವಾಗಿದೆ.
#KarnatakaGovt #karnatakatransportminister #karnatakapwdminister #KarnatakaHealthMinister #karnatakapwd #karnatakahealth #karnatakapwddepartment #chikkamagaluruadministration #chikkamagaluru