11:39 PM Wednesday25 - March 2026
ಬ್ರೇಕಿಂಗ್ ನ್ಯೂಸ್
ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್… ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌: ಡಿಸಿಎಂ ಡಿ.ಕೆ. ಶಿವಕುಮಾರ್ ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ

ಇತ್ತೀಚಿನ ಸುದ್ದಿ

ಅಧಿವೇಶನ ಆರಂಭದ ಹಿಂದಿನ ರಾತ್ರಿ ಮೈಕ್ ಚೆಕ್ ಮಾಡಲು ಹೋದಾಗ ತೆಗೆದ ಫೋಟೋ: ವಿವಾದ ಕುರಿತು ಸ್ಪೀಕರ್ ಖಾದರ್ ಮಂಗಳೂರಿನಲ್ಲಿ ಸ್ಪಷ್ಟನೆ

29/07/2024, 13:36

ಮಂಗಳೂರು(reporterkarnataka.com): ವಿಧಾನಸೌಧಕ್ಕೆ ಅತಿಥಿಗಳು, ವಿದ್ಯಾರ್ಥಿಗಳು ಬಂದಾಗಲೆಲ್ಲ ಅಲ್ಲೇ ಫೋಟೋ ತೆಗೀತ್ತೀವಿ. ಇದರಲ್ಲಿ ‌ತಪ್ಪು ಹುಡುಕೋ ಪ್ರಯತ್ನ ಬೇಡ, ಫೋಟೋ ತೆಗೀಬಾರದು ಅಂತ ಏನೂ ಇಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ ನೀಡಿದ್ದಾರೆ.
ಸ್ಪೀಕರ್ ಪೀಠದ ಎದುರು ಕಾಂಗ್ರೆಸ್ ನಾಯಕರ ಜೊತೆ ಖಾದರ್ ಫೋಟೋ ವೈರಲ್ ಆದ ವಿಚಾರದ ಬಗ್ಗೆ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.
ಅಧಿವೇಶನ ನಡೆಯುವಾಗ ತೆಗೆದ ಫೋಟೋ ಅಲ್ಲ. ಅಧಿವೇಶನ ನಡೆಯುವ ಮೊದಲು ರಾತ್ರಿ ತೆಗೆದ ಫೋಟೋ ಅದು. ನಾನು ಅಧಿವೇಶನದ ಮೊದಲು ಮೈಕ್ ಚೆಕ್ ಮಾಡಲು ರಾತ್ರಿ ಹೋಗಿದ್ದೆ. ಆಗ ಮಂಗಳೂರಿನ ಮಾಜಿ ಮೇಯರ್ ಒಬ್ಬರು ತೆಗೆದ ಫೋಟೋ ಅದು ಎಂದು ಖಾದರ್ ಹೇಳಿದರು.
ಶಿರೂರು ಘಟನೆ ಬಗ್ಗೆ ಎಲ್ಲರಿಗೂ ಬಹಳಷ್ಟು ಬೇಸರ ಇದೆ. ಕೇರಳದ ಶಾಸಕರು, ಎಂಪಿಗಳು ನನ್ನನ್ನು ಸಂಪರ್ಕ ಮಾಡಿದ್ದಾರೆ. ಆದಷ್ಟು ಬೇಗ ಮೃತದೇಹ ಸಿಗಲಿ, ಗೌರವಯುತ ಅಂತ್ಯ ಸಂಸ್ಕಾರ ಅಗಲಿ ಎಂದು ಅವರು ನುಡಿದರು.
ವಿಧಾನಸಭೆ ಅಧಿವೇಶನದಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. 9 ದಿನಗಳಲ್ಲಿ 8 ದಿವಸ ಅಧಿವೇಶನ ನಡೆದಿದೆ. ರಾಜ್ಯದಲ್ಲಿ ಮಳೆ, ನೆರೆ, ಪ್ರವಾಹ ಸೇರಿ ಅನೇಕ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಶೂನ್ಯ ವೇಳೆ ಸೇರಿ ಹಲವು ಅವಧಿಗಳಲ್ಲಿ ಚರ್ಚೆಗಳು ಆಗಿವೆ. ಆದರೆ ಹೆಚ್ಚಿನ ಚರ್ಚೆ ಆಗಿಲ್ಲ ಅನ್ನೋ ವಿಷಾದ ನನಗಿದೆ. ಮೂರು‌ ತಿಂಗಳಿಗೊಮ್ಮೆ ಅಧಿವೇಶನ ಆಗೋವಾಗ ಜನರ ಸಮಸ್ಯೆಗೆ ಮಹತ್ವ ಕೊಡಬೇಕು. ಜನರ ಬಗ್ಗೆ ಹೆಚ್ಚಿನ ಚರ್ಚೆ ಆಗಬೇಕು. ಬೇರೆ ವಿಷಯ ಯಾವಾಗಲೂ ಮಾತನಾಡಬಹುದು ಎಂದು ಸ್ಪೀಕರ್ ನುಡಿದರು.
ತುಳು ಭಾಷೆ ಪ್ರಸ್ತಾಪವಾದ ಬಗ್ಗೆ ಮಾತನಾಡಿದ ಅವರು, ಒಂದು ಭಾಷೆಯ ಮಹತ್ವ, ಇತಿಹಾಸ, ಸಂಸ್ಕೃತಿ, ಪರಂಪರೆ ರಾಜ್ಯದ ಜನರಿಗೆ ಪರಿಚಯ ಆಗಬೇಕು. ಅಧಿವೇಶನದಲ್ಲಿ ಇದನ್ನು ಯಾರೂ ಅಪಹಾಸ್ಯ ಮಾಡಿಲ್ಲ, ಆದರೆ ಸಣ್ಣ ಸಣ್ಣ ಮಾತು‌ ಬರುತ್ತೆ. ತುಳು ಅಕಾಡೆಮಿ ಈ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಕೆಲಸ ಮಾಡಬೇಕು ಎಂದು ಅವರು ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು