2:48 PM Wednesday15 - January 2025
ಬ್ರೇಕಿಂಗ್ ನ್ಯೂಸ್
ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ… ಹಸುಗಳ ಕೆಚ್ಚಲು ಕೊಯ್ದ ‘ವ್ಯಾಘ್ರ’ನ ಬಂಧನ: ಬಿಹಾರ ಮೂಲದ ದುಷ್ಟನಿಗೆ ನ್ಯಾಯಾಂಗ ಬಂಧನ ನಂಜನಗೂಡು: ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ ನಿರ್ವಿಘ್ನವಾಗಿ ಮುಕ್ತಾಯ ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಆಧಾರ್ ಕಾರ್ಡ್ ಇದ್ದ ಮಾತ್ರಕ್ಕೆ ದೇಶದ ಪ್ರಜೆಯಾಗುವುದಿಲ್ಲ: ಕೇಂದ್ರ ಸರಕಾರ ಸ್ಪಷ್ಟನೆ

05/02/2022, 23:13

ಹೊಸದಿಲ್ಲಿ(reporterkarnataka.com): ಆಧಾರ್ ಕಾರ್ಡ್ ಇದ್ದ ಮಾತ್ರಕ್ಕೆ ಅದು ರಾಷ್ಟ್ರೀಯ ಪೌರತ್ವ ಪ್ರಮಾಣ ಪತ್ರವಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

ಕೇಂದ್ರ ನ್ಯಾಯಾಂಗ ಸಚಿವ ಕಿರಣ್ ರಿಜುಜು ಲೋಕಸಭೆಗೆ ಈ ವಿಷಯವನ್ನ ಸ್ಪಷ್ಟಪಡಿಸಿದ್ದು, ಆಧಾರ್ ಕಾರ್ಡ್ ಪೌರತ್ವದ ಮಾನ್ಯತೆಯಾಗಿದೆ.

ಆದ್ರೆ, ಆಧಾರ್ ಕಾರ್ಡ್ ಇದ್ದ ಮಾತ್ರಕ್ಕೆ ಪೌರತ್ವವಿದ್ದಂತಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಂದ್ಹಾಗೆ, ಭ್ರಷ್ಟಾಚಾರದಿಂದಾಗಿ ಅನೇಕ ಅಕ್ರಮ ವಲಸಿಗರು ಆಧಾರ್ ಕಾರ್ಡ್‌ಗಳನ್ನ ಪಡೆದಿದ್ದಾರೆ ಎನ್ನುವ ಆರೋಪಗಳು ಆಗಾಗ್ಗೆ ಕೇಳಿ ಬರುತ್ಲೇ ಇವೆ. ಅದ್ರಲ್ಲೂ ಈ ಪರಿಸ್ಥಿತಿ ಗಡಿ ರಾಜ್ಯಗಳಲ್ಲಿ ಹೆಚ್ಚು.

ಹೈದರಾಬಾದ್‌ನಂತಹ ಮೆಟ್ರೋ ನಗರಗಳಲ್ಲಿ ಇತರ ದೇಶಗಳ ಜನರು ಆಧಾರ್ ಕಾರ್ಡ್‌ಗಳನ್ನ ಪಡೆದು ಪಾಸ್‌ಪೋರ್ಟ್‌ಗಳು ಮತ್ತು ಇತರ ಪೌರತ್ವ ಪ್ರಮಾಣಪತ್ರಗಳನ್ನ ಪಡೆದಿರುವ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಬೆಳೆಯುತ್ತಿರುವ ಆಧಾರ್ ಕಾರ್ಡ್ ಭಾರತೀಯ ಪ್ರಜೆ ಎಂಬ ಗ್ರಹಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪೌರತ್ವವನ್ನು ಪಡೆಯಲು ವಿದೇಶಿಯರಿಗೆ ವಿಶಿಷ್ಟವಾದ ಮಾರ್ಗಗಳಿವೆ ಎಂದು ಸ್ಪಷ್ಟಪಡಿಸಿದೆ.

ಅಕ್ರಮವಾಗಿ ವಲಸೆ ಬಂದವರು, ಅಕ್ರಮ ಮಾರ್ಗಗಳ ಮೂಲಕ ಆಧಾರ್ ಕಾರ್ಡ್ ಪಡೆಯುವುದು ಮತ್ತು ಭಾರತೀಯ ಪ್ರಜೆಯಾಗಿ ಶಾರ್ಟ್‌ಕಟ್‌ಗಳನ್ನ ಆಯ್ಕೆ ಮಾಡುವುದು ಅಪರಾಧ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆಧಾರ್ ವಿಚಾರದಲ್ಲಿ ಕೇಂದ್ರ ಇತ್ತೀಚೆಗೆ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಂಡಿದೆ. ಮತದಾರರ ಚೀಟಿಗೂ ಲಿಂಕ್ ಮಾಡಿ ಸಂಸತ್ತಿನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಮತದಾರರು ತಮ್ಮ ಆಧಾರ್ ಸಂಖ್ಯೆಯೊಂದಿಗೆ ಮತದಾರರ ಕಾರ್ಡ್ ಸಂಖ್ಯೆಯನ್ನ ಲಿಂಕ್ ಮಾಡಬೇಕು. ಆದರೆ, ಇದು ಸ್ವಯಂಪ್ರೇರಿತ ಎಂದು ಕೇಂದ್ರ ಹೇಳಿದೆ. ಭಾರತದಲ್ಲಿ ಇಂದಿಗೂ ಆಧಾರ್ ಪ್ರಮುಖ ಸಂಖ್ಯೆಯಾಗಿದೆ. ಇದು ವ್ಯಾಪಕವಾಗಿ ಮಾನ್ಯವಾದ ಗುರುತಿನ ಚೀಟಿಯಾಗಿದೆ.

ಪ್ರಸ್ತುತ ಭಾರತದಲ್ಲಿ ಆಧಾರ್ ಕಾರ್ಡ್ ಇಲ್ಲದೇ ದೈನಂದಿನ ಕೆಲಸ ಮಾಡಲು ಸಾಧ್ಯವಿಲ್ಲ. ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಮಾನ್ಯವಾಗಿರುತ್ತದೆ. ಆಧಾರ್ ಕಾರ್ಡ್‌ನಲ್ಲಿ ಫೋಟೋ, ಹೆಸರು ಮತ್ತು ವಿಳಾಸ ಮಾತ್ರ ಕಾಣಿಸುತ್ತದೆ. ಆದ್ರೆ, ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್, ಫೋನ್ ನಂಬರ್ ಎಲ್ಲವೂ ರಿಜಿಸ್ಟರ್ ಆಗಿದೆ. ಮತದಾರರ ಚೀಟಿ ಇಲ್ಲದೇ ಮತ ಚಲಾಯಿಸುವಂತಿಲ್ಲ. ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುವಂತಿಲ್ಲ, ಪಾಸ್ ಪೋರ್ಟ್ ಇಲ್ಲದೆ ವಿದೇಶಕ್ಕೆ ಹೋಗುವಂತಿಲ್ಲ. ಆದ್ರೆ, ಆಧಾರ್ ಕಾರ್ಡ್ ಇಲ್ಲದೇ ಯಾವುದೇ ಕೆಲಸ ಮಾಡುವಂತಿಲ್ಲ. ಆಧಾರ್ ಕಾರ್ಡ್ ಹೊಂದಿದ್ದರೆ ಇತರೆ ಗುರುತಿನ ಚೀಟಿಗಳನ್ನ ತೆಗೆದುಕೊಳ್ಳಬಹುದು. ಆಧಾರ್ ವಿಚಾರದಲ್ಲಿ ಕೇಂದ್ರ ನೀಡಿರುವ ಇತ್ತೀಚಿನ ಹೇಳಿಕೆ ಆಧಾರ್ ಹೊಂದಿದ್ದರೆ ಪೌರತ್ವ ಪಡೆಯಬಹುದು ಎಂದು ಸ್ಪಷ್ಟಪಡಿಸಿದಂತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು