ಇತ್ತೀಚಿನ ಸುದ್ದಿ
ಹುಡ್ಗಿಯರಿಗೆ ಮೆಸೇಜ್ ಆರೋಪ: ಯುವ ಕಾಂಗ್ರೆಸ್ ಮುಖಂಡನಿಗೆ ಸ್ವಪಕ್ಷೀಯರಿಂದಲೇ ಥಳಿತ; ಅಂಗಲಾಚಿದ ಪತ್ನಿ
29/10/2025, 16:01
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಅಣ್ಣಾ… ಪ್ಲೀಸ್ ಅಣ್ಣಾ… ಅಣ್ಣಾ… ನನ್ನ ಗಂಡ ಅಣ್ಣಾ… ಬಿಟ್ಟು ಬಿಡಿ ಅಣ್ಣಾ…
ಗಂಡ ಮಾಡಿದ ತಪ್ಪಿಗೆ ಅನ್ಯರ ಎದುರು ಕಣ್ಣೀರಾಕಿ ಬೇಡುತ್ತಿರುವ ಪತ್ನಿಯ ದುಸ್ಥಿಯನ್ನು ಕಂಡರೆ ಒಂದು ಕ್ಷಣ ಯಾವ ಕಟುಕನ ಮನಸ್ಸು ಕೂಡ ಕರಗಬಹುದು.





ಚಿಕ್ಕಮಗಳೂರು ನಗರದ ಆದಿಶಕ್ತಿ ನಗರದ ಮನೆಯೊಂದರಲ್ಲಿ ನಡೆದ ಘಟನೆ. ಇಲ್ಲಿನ ಕಾಂಗ್ರೆಸ್ ನ ಯುವ ಮುಖಂಡ ಆದಿತ್ಯನಿಗೆ ಕಾಂಗ್ರೆಸ್ಸಿಗರಿಂದಲೇ ಹಿಗ್ಗಾಮುಗ್ಗಾ ಗೂಸಾ ಬಿದ್ದಿದೆ.
ಆದಿತ್ಯನು ಹುಡುಗಿಯರಿಗೆ, ಪರಿಚಿತರ ಪತ್ನಿಯರಿಗೆ ಮೆಸೇಜ್ ಮಾಡುತ್ತಿದ್ದ ಆರೋಪದ ಮೇಲೆ ತಂಡವೊಂದು ಆದಿತ್ಯನಿಗೆ ಥಳಿಸಿದೆ. ಪರಿಚಿತ ತಂಡವೇ
ಸಾಕ್ಷಿ ತೋರಿಸಿ ರಕ್ತ ಒಸರುವ ತರಹ ಹಿಗ್ಗಾಮುಗ್ಗಾ ಥಳಿಸಿದೆ.
ಆದಿತ್ಯ ಆಲ್ದೂರು ಹೋಬಳಿಯ ಮಾಜಿ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.












