1:58 PM Wednesday19 - November 2025
ಬ್ರೇಕಿಂಗ್ ನ್ಯೂಸ್
ಕೊಡಗಿನಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾವಳಿ ತಡೆಗೆ ಜಿಲ್ಲಾಡಳಿತ ಕ್ರಮ: ಶ್ವಾನಗಳ ಸ್ಥಳಾಂತರಕ್ಕಾಗಿ… Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ…

ಇತ್ತೀಚಿನ ಸುದ್ದಿ

Accident | ತೀರ್ಥಹಳ್ಳಿ ಬಳಿ ಲಾರಿ- ಬೈಕ್ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು; ಇನ್ನೊಬ್ಬ ಗಂಭೀರ

23/02/2025, 18:51

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಬ್ಬ ಸವಾರ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬ ಯುವಕನ ಸ್ಥಿತಿ ಗಂಭೀರವಾಗಿರುವ ಘಟನೆ ತಾಲ್ಲೂಕಿನ ಕುಡುಮಲ್ಲಿಗೆಯ ಬಳಿ ನಡೆದಿದೆ.

ಬಾಗಲಕೋಟೆಯಿಂದ ಇಬ್ಬರು ಯುವಕರು ತೀರ್ಥಹಳ್ಳಿ ಮಾರ್ಗದಲ್ಲಿ ಚಲಿಸುತ್ತಿದ್ದರು. ವೇಳೆ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ 10 ಚಕ್ರದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆ ಬೈಕ್ ಲಾರಿಯ ಚಕ್ರಕ್ಕೆ ಸಿಲುಕಿದ್ದು ಒಬ್ಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಪಟ್ಟಣದ ಸರ್ಕಾರಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಾಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರೀಶೀಲನೆ ನಡೆಸುತ್ತಿದ್ದಾರೆ. ಯುವಕರ ಹಿನ್ನೆಲೆ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು