ಇತ್ತೀಚಿನ ಸುದ್ದಿ
Accident | ದಾವಣಗೆರೆ: ಭೀಕರ ರಸ್ತೆ ಅಪಘಾತ; 3 ಮಂದಿ ಸ್ಥಳದಲ್ಲೇ ದಾರುಣ ಸಾವು, ಇಬ್ಬರು ಗಂಭೀರ
05/04/2025, 12:25

ದಾವಣಗೆರೆ(reporterkarnataka.com): ದಾವಣಗೆರೆಯ
ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಬಸ್ ಹಾಗೂ ಕಾರಿನ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಸಾವನ್ನಪ್ಪಿದ ಮೂವರನ್ನು ಬೆಳಗಾವಿ ಮೂಲದ ಬಸವರಾಜಪ್ಪ(38), ಶ್ರೀಧರ (32) ಹಾಗೂ ವಿಜಯ್ ಕುಮಾರ್ (35) ಎಂದು ಗುರುತಿಸಲಾಗಿದೆ.
ಬಸ್ ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.