12:52 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಅಬುದಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಹಿಂದೂ ದೇಗುಲಕ್ಕೆ ಭಾರತೀಯರಿಂದ ಇಟ್ಟಿಗೆ ಪೂಜೆ

30/05/2023, 21:23

ಮಂಗಳೂರು(reporterkarnataka.com): ಇದೇ ಬರುವ ಫೆಬ್ರವರಿಯಲ್ಲಿ ಅಬುದಾಬಿಯಲ್ಲಿ ಸಮರ್ಪಣೆಯಾಗಲಿರುವ ಅರಬ್ ರಾಷ್ಟ್ರದ ಪ್ರಥಮ ಬೃಹತ್ ಹಿಂದೂ ದೇವಸ್ಥಾನಕ್ಕೆ ಯೂಥ್ ಆಫ್ ಜಿ ಎಸ್ ಬಿ ತಂಡ ಹಾಗೂ ತನ್ನೊಂದಿಗೆ ಆಗಮಿಸಿದ ಸುಮಾರು 130 ಜಿ ಎಸ್ ಬಿ ಸಮುಯದಾಯದ ಮಂದಿ ಭೇಟಿ ನೀಡಿ ಮಂದಿರ ನಿರ್ಮಾಣಕ್ಕೆ ಉಪಯೋಗವಾಗುವ ಇಟ್ಟಿಗೆಗೆ ಪೂಜೆ ಸಲ್ಲಿಸಿ ದೇಣಿಗೆ ಸಮರ್ಪಿಸಿದರು.
2018ರಲ್ಲಿ ಮಂದಿರ ನಿರ್ಮಾಣಕ್ಕೆ ಚಾಲನೆ ದೊರಕಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪ್ರೊಜೆಕ್ಟ್ ಕಾಮಗಾರಿಗೆ ಚಾಲನೆ ನೀಡಿದ್ದರು. ಸುಮಾರು 55 ಸಾವಿರ ಚದರ ಕಿ ಮೀ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಹಿಂದೂ ಮಂದಿರದಲ್ಲಿ ಸ್ವಾಮಿ ನಾರಾಯಣ, ವೆಂಕಟರಮಣ, ರಾಮ, ಕೃಷ್ಣ, ಶಿವ , ಅಯ್ಯಪ್ಪ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಾಗುತ್ತದೆ.
ಬ್ಯಾಪ್ಸ್ ಸಂಸ್ಥೆ ಮಂದಿರ ನಿರ್ಮಾಣದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದು ಮಂದಿರದ ಆವರಣದಲ್ಲಿ ಧಾರ್ಮಿಕ ಪ್ರವಚನದ ಸಭಾಂಗಣ, ಕ್ರೀಡಾಂಗಣ, ಪವಿತ್ರ ನದಿಗಳ ತೀರ್ಥ ಒಳಗೊಂಡ ಕೆರೆ, ಯೋಗ ಮಂಟಪ, ಕಲಾ ಮಂಟಪ ಕೂಡ ನಿರ್ಮಾಣಗೊಳ್ಳಲಾಗಿದೆ ಎಂದು ತಿಳಿಸಲಾಯಿತು.
ದೂರದ ಭಾರತದಿಂದ ಭಕ್ತಾದಿಗಳಾಗಿ ಭಾಗವಹಿಸಿದ ಯೂಥ್ ಆಫ್ ಜಿ ಎಸ್ ಬಿ ತಂಡಕ್ಕೆ ಬ್ಯಾಪ್ಸ್ ಸಂಸ್ಥೆ ಮಂದಿರದ ಸಂಪೂರ್ಣ ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಇಟ್ಟಿಗೆಗೆ ಪೂಜೆಯನ್ನೂ ನೆರವೇರಿಸಲಾಯಿತು.

ಜೀವಮಾನದ ಅವಿಸ್ಮರಣೀಯ ಘಟನೆಗಳಲ್ಲಿ ಇದು ಒಂದಾಗಿದ್ದು ವಿದೇಶದಲ್ಲಿ ಅದು ಕೂಡ ಇಸ್ಲಾಂ ರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಜಗತ್ತಿನ ಏಕೈಕ ಬೃಹತ್ ಹಿಂದೂ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ನಮಗೆ ದೊರೆತ ದೊಡ್ಡ ಭಾಗ್ಯ ಎಂದು ಸಮುದಾಯದ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಹನುಮಂತ ಕಾಮತ್, ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು, ಸಂತೋಷ್ ಭಂಡಾರಿ, ಗೋಪಾಲಕೃಷ್ಣ ಭಟ್, ಸುಜಿತ್ ಬಾಳಿಗಾ ಹಾಗೂ ಇತರರು ಉಪಸ್ಥಿತರಿದ್ದರು.
ಮೊದಲ ಅಂತರರಾಷ್ಟ್ರೀಯ ಜಿ ಎಸ್ ಬಿ ಸಮ್ಮೇಳನದ ಅಂಗವಾಗಿ ದುಬೈ ಗೆ ಜಿ ಎಸ್ ಬಿ ಸಮುದಾಯ ಪ್ರವಾಸ ಕೈಗೊಂಡಿದ್ದು ಈ ನಡುವೆ ಮಂದಿರಕ್ಕೆ ಭೇಟಿ ನೀಡಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು