ಇತ್ತೀಚಿನ ಸುದ್ದಿ
ಸತತ ಭೂಕಂಪನಕ್ಕೀಡಾದ ದ.ಕ.- ಕೊಡಗು ಗಡಿಭಾಗದ ಚೆಂಬುವಿನಲ್ಲಿ ವರುಣಾಘಾತ: ಆತಂಕಕ್ಕೀಡಾದ ಜನತೆ
02/07/2022, 15:29

ಮಡಿಕೇರಿ(reporterkarnataka.com):
ಸತತ ಭೂಕಂಪನಕ್ಕೆ ತುತ್ತಾಗಿರುವ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗ ಚೆಂಬುವಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.
ಚೆಂಬು ಪರಿಸರದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 192 ಮಿಮೀ ಮಳೆ ಸುರಿದಿದೆ ಎಂದು ಮಾಹಿತಿ ಲಭ್ಯವಾಗಿದೆ. ಸತತ ಕಂಪನದಿಂದ ಭಯಭೀತರಾದ ಸ್ಥಳೀಯ ನಾಗರಿಕರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
ಮಳೆಯ ತೀವ್ರತೆ ಹೆಚ್ಚುತ್ತಿದ್ದಂತೆಯೇ ಭೂಕುಸಿತ, ಪ್ರವಾಹ ಭೀತಿ ಜನತೆಯನ್ನು ಕಾಡುತ್ತಿದೆ. ಚೆಂಬು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಭೂಕಂಪನ ಸಂಭವಿಸುತ್ತಿದ್ದು, ಜನತೆ ಆತಂಕದಲ್ಲಿಯೇ ದಿನಕಳೆಯುವಂತಾಗಿದೆ.