ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನಾ’ ತಂಡದ ಮೇ ತಿಂಗಳ ಸಹಾಯಧನ ಸೀನ ಗುರುಬೆಟ್ಟುಗೆ ಹಸ್ತಾಂತರ
04/06/2021, 18:36
ಮಂಗಳೂರು(reporterkarnataka news): ಆರದಿರಲಿ ಬದುಕು ಆರಾಧನಾ ತಂಡದ ಮೇ ತಿಂಗಳ ಸಹಾಯ ಧನವನ್ನು ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಸೀನ ಗುರುಬೆಟ್ಟು ಅವರಿಗೆ ನೀಡಲಾಯಿತು.
ಕಡು ಬಡತನದಲ್ಲಿರು ಸೀನ ಅವರಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರಾದ ಅಭಿಷೇಕ್ ಶೆಟ್ಟಿ ಐಕಳ, ನವೀನ್ ಪುತ್ತೂರು, ದೇವಿ ಪ್ರಸಾದ್, ಶ್ರೀನಿವಾಸ ಬಜಪೆ, ನಾಗರಾಜ ಶೆಟ್ಟಿ ಅಂಬೂರಿ, ರಂಗನಾಥ್ ಪಕ್ಷಿಕೆರೆ, ಪದ್ಮಶ್ರೀ ಭಟ್ ನಿಡ್ಡೋಡಿ ಉಪಸ್ಥಿತರಿದ್ದರು.