ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನ ತಂಡ: ಮೇ ತಿಂಗಳ ಸಹಾಯ ಹಸ್ತ ಐಕಳ ಸದಾನಂದ ಪೂಜಾರಿಗೆ ಹಸ್ತಾಂತರ
11/06/2022, 09:29
ಮೂಡುಬಿದರೆ( reporterkarnataka.com): ಜನ ಸೇವೆಯೆ ಜನಾರ್ಧನ ಸೇವೆ ಎಂಬಂತೆ ಇಂದು ಆರದಿರಲಿ ಬದುಕು ಆರಾಧನ ತಂಡದ ಮೇ ತಿಂಗಳ ಸಹಾಯ ಹಸ್ತವನ್ನು ದ.ಕ ಜಿಲ್ಲೆಯ ಮಂಗಳೂರಿನ ಐಕಳ ಗ್ರಾಮದ ಸದಾನಂದ ಪೂಜಾರಿ ಅವರ ಕಷ್ಟವನ್ನು ಅರಿತ ನಮ್ಮ ತಂಡ ಅವರ ಬಾಯಿ ಕ್ಯಾನ್ಸರ್ ಖಾಯಿಲೆಯ ಚಿಕಿತ್ಸೆಗೆ ಅವರ ಮನೆಗೆ ಭೇಟಿ ನೀಡಿ ಧನಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಐಕಳ, ದೇವಿಪ್ರಸಾದ್ ಶೆಟ್ಟಿ, ನವೀನ್ ಪುತ್ತೂರು, ಶ್ರೀನಿವಾಸ ಬಜಪೆ,ಲಿಲೇಶ್ ಶೆಟ್ಟಿಗಾರ್, ಗಣೇಶ್ ಪೈ, ಧನಂಜಯ ಶೆಟ್ಟಿ, ನಾಗರಾಜ ಶೆಟ್ಟಿ ಅಂಬೂರಿ, ಪ್ರಸಾದ್ ನಾಯಕ್ ಉಡುಪಿ, ಬಸವರಾಜ ಮಂತ್ರಿ,ಧೀನ್ ರಾಜ್ ಕೆ, ರಾಮ್ ಪ್ರಸಾದ್,ಪ್ರಭಾಕರ್ ಮಂಗಳೂರು, ವಿವೇಕ್ ಪ್ರಭು ನಿಡ್ಡೋಡಿ,ದಿವಾಕರ ಪೂಜಾರಿ ಮುಂಬಯಿ, ದಿನೇಶ್ ಸಿದ್ದಕಟ್ಟೆ, ರಂಜಿತ್ ಸುವರ್ಣ,ನಿಲೇಶ್ ಕಟೀಲು, ರಾಕೇಶ್ ಪೊಳಲಿ, ಶ್ರೀಕಾಂತ್ ಭಟ್ , ಪ್ರಸನ್ನ ಭಟ್, ಪ್ರವೀಣ್ ಶೆಟ್ಟಿ, ಶಾರದಾ ಅಂಚನ್ ಉಪಸ್ಥಿತರಿದ್ದರು.