ಇತ್ತೀಚಿನ ಸುದ್ದಿ
ಎಎಪಿಯ ಗೆಲುವು ಪಂಜಾಬ್‌ನಲ್ಲಿ ಬರಲಿರುವ ಬದಲಾವಣೆಯ ಸಂಕೇತ: ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್
28/12/2021, 12:58
ಹೊಸದಿಲ್ಲಿ(reporterkarnataka.com): ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವು ಪಂಜಾಬ್‌ನಲ್ಲಿ ಬರಲಿರುವ ಬದಲಾವಣೆಯ ಸಂಕೇತ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ದೆಹಲಿಯಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ರಾಜ್ಯದ ಜನತೆ ‘ಭ್ರಷ್ಟ ರಾಜಕಾರಣವನ್ನು ತಿರಸ್ಕರಿಸಿ ಎಎಪಿಯ ಪ್ರಾಮಾಣಿಕ ರಾಜಕಾರಣವನ್ನು ಆಯ್ಕೆ ಮಾಡಿದ್ದಾರೆ ಎಂದು ನುಡಿದರು.
ಕೇಜ್ರಿವಾಲ್ ಅವರು ವಿಜೇತ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದರು.
ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 14 ಸ್ಥಾನಗಳನ್ನು ಗೆಲ್ಲುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದಿದೆ.
ಒಟ್ಟು 35 ಸ್ಥಾನಗಳ ಪೈಕಿ ಉಳಿದಂತೆ ಬಿಜೆಪಿ 12, ಕಾಂಗ್ರೆಸ್ 8 ಮತ್ತು ಶಿರೋಮಣಿ ಅಕಾಲಿದಳ 1 ಸ್ಥಾನ ಗೆದ್ದಿದೆ.