ಇತ್ತೀಚಿನ ಸುದ್ದಿ
ಆನೆ ದಾಳಿ ಕಡಿಮೆಯಾಗುತ್ತಿದ್ದಂತೆ ಹುಲಿ ಕಾಟ ಶುರು: ವ್ಯಾಘ್ರನ ಅಟ್ಟಹಾಸಕ್ಕೆ 5 ಹಸುಗಳು ಬಲಿ
20/03/2024, 22:50

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಂ
ಚಿಕ್ಕಮಗಳೂರು ತಾಲೂಕಿನ.ಆಲ್ದೂರು ಸಮೀಪದ ಕಠಾರದಹಳ್ಳಿಯಲ್ಲಿ ಹುಲಿ ದಾಳಿಗೆ 5 ಹಸುಗಳು ಬಲಿಯಾದ ಘಟನೆ ನಡೆದಿದೆ.
ಚಂದ್ರು-ಮುಳ್ಳಪ್ಪ ಎಂಬುವರಿಗೆ ಸೇರಿದ ಹಸುಗಳು ಇದಾಗಿವೆ.
ನಿನ್ನೆ ಮೇಯಲು ಹೋಗಿದ್ದ ಹಸುಗಳು ಮನೆಗೆ ಬಂದಿರಲಿಲ್ಲ.
ಇಂದು ಕಾಫಿ ತೋಟದಲ್ಲಿ ಹಸುವಿನ ಮೃತದೇಹ ಪತ್ತೆಯಾಗಿವೆ.
ಒಂದು ಹಸು ತೀವ್ರ ನಿರ್ತಾಣಗೊಂಡಿದ್ದು, ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆನೆ ದಾಳಿಯಿಂದ ಕಂಗಾಲಾಗಿದ್ದ ಜನರಿಗೆ ಹುಲಿ ದಾಳಿಯಿಂದ ಮತ್ತೆ ಆತಂಕ ಎದುರಾಗಿದೆ.
ಮನೆಯಿಂದ ಹೊರಬಾರಲು ಜನ, ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.