ಇತ್ತೀಚಿನ ಸುದ್ದಿ
ಅನಾಥ, ಬಡ ಮಕ್ಕಳಿಗೆ ನಿತ್ಯ ಅನ್ನದಾನ: ಮಹಾನ್ ಸಾಧಕ ಮಸ್ಕಿಯ ಡಾ. ಶಿವಶರಣಪ್ಪ ಇತ್ಲಿ
03/10/2021, 16:47
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್ ನಲ್ಲಿರುವ ಆಶಾಕಿರಣ ಅನಾಥ ಮತ್ತು ಬಡಮಕ್ಕಳ ಆಶ್ರಮದಲ್ಲಿ ನಿತ್ಯ ಅನ್ನದಾನ ಜತೆಗೆ ಶಿಕ್ಷಣಕ್ಕೆ ಸಾಥ್ ನೀಡುತ್ತಿರುವ ಡಾ. ಶಿವಶರಣಪ್ಪ ಕುಟುಂಬವು ಇದೀಗ ಮಸ್ಕಿ ಭಾಗದಲ್ಲಿ ಡಾ. ಶಿವಶರಣಪ್ಪ ಫೌಂಡೇಶನ್ ಚಾಲನೆ ನೀಡಿದೆ.
ಮೂಲತಃ ರಾಯಚೂರಿನವರಾದ ಡಾ. ಶಿವಶರಣಪ್ಪ ಕುಟುಂಬವು 50 ವರ್ಷಗಳ ಹಿಂದೆ ಮಸ್ಕಿಗೆ ಆಗಮಿಸಿತ್ತು. ಮಸ್ಕಿಯಲ್ಲಿ ಆಸ್ಪತ್ರೆ ತೆರೆದು ಡಾ. ಇತ್ಲಿ ಅವರು ವೈದ್ಯಕೀಯ ನೆರವಿನ ಜತೆಗೆ ಸಮಾಜಮುಖಿ ಕೆಲಸ ಮಾಡಲಾರಂಭಿಸಿದರು. ಡಾ. ಇತ್ಲಿ ಅವರ ಪುಣ್ಯ ಕಾರ್ಯಕ್ಕೆ ಅವರ ಕುಟುಂಬ ಕೈಜೋಡಿಸಿತು. ಇದೀಗ ಡಾ. ಶಿವಶರಣಪ್ಪ ಫೌಂಡೇಶನ್ ಎಂಬ ಸಂಸ್ಥೆ ತಲೆ ಎತ್ತಿ ನಿಂತಿದೆ. ಡಾ. ಇತ್ಲಿ ಅವರು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಘನತೆ ಮೆರೆದಿದ್ದಾರೆ. ಇಲ್ಲಿ ಬಡವರು, ಅನಾಥರು, ದಿಕ್ಕು ಇಲ್ಲದವರು ಡಾ. ಇತ್ಲಿ ಅವರನ್ನು ದೇವರ ತರಹ ಪೂಜಿಸುತ್ತಾರೆ. ಸಿಂಧನೂರಿನ ಪಿಡಬ್ಲ್ಯೂಡಿಕ್ಯಾಂಪ್ ನಲ್ಲಿರುವ ಆಶಾಕಿರಣ ಅನಾಥ ಮತ್ತು ಬಡಮಕ್ಕಳಿಗೆ ಅನ್ನದಾನ ಮಾಡುತ್ತಿದ್ದರು. ಜತೆಗೆ ಅವರ ಶಿಕ್ಷಣಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.