ಇತ್ತೀಚಿನ ಸುದ್ದಿ
ಆಸ್ತಿ ವಿವಾದ: 4 ಮಂದಿ ಸಹೋದರರ ಬರ್ಬರ ಕೊಲೆ: ಸುಪಾರಿ ಕಿಲ್ಲರ್ ಗಳ ಮೂಲಕ ಹತ್ಯೆ
29/08/2021, 18:53

ಬಾಗಲಕೋಟೆ(reporterkarnataka.com): ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಾಲ್ವರು ಸಹೋದರರನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.
ಜಮಖಂಡಿಯ ಮಧುರಖಂಡಿ ಎಂಬಲ್ಲಿ ಮಲ್ಲಪ್ಪ ಉದರಗಟ್ಟಿ(33), ಬಸಪ್ಪ ಉದರಗಟ್ಟಿ(37), ಈಶ್ವರ ಉದರಗಟ್ಟಿ(35) ಹಾಗೂ 45ರ ಹರೆಯದ ಇನ್ನೋರ್ವ ಸಹೋದರರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಸುಪಾರಿ ಕಿಲ್ಲರ್ ಗಳ ಮೂಲಕ ಕೊಲೆ ನಡೆಸಲಾಗಿದೆ. ಜಮಖಂಡಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.