ಇತ್ತೀಚಿನ ಸುದ್ದಿ
ರಸ್ತೆಯಲ್ಲಿ ಅಡ್ಡ ಬಂದ ಕಾಳಿಂಗ ಸರ್ಪ: ವಾಹನ ಪಲ್ಟಿ; ಚಾಲಕನ ಸಂತೈಸಿದ ಶಾಸಕ ಆರಗ
28/03/2026, 18:34
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ರಾಜ್ಯ ಹೆದ್ದಾರಿ ತೀರ್ಥಹಳ್ಳಿ ಕೋಣಂದೂರು ಅನಂತಪುರ ಮಾರ್ಗದ ಗುಡ್ಡೆಕೊಪ್ಪ ಸಮೀಪ ಹಿರೇಸರದಲ್ಲಿ ಸಾಗರದಿಂದ ಕಾರ್ಕಳ ತೆರಳುತ್ತಿದ್ದ ಚಾಲಿ ಅಡಿಕೆ ತುಂಬಿದ ವಾಹನ ಒಂದಕ್ಕೆ ರಸ್ತೆಯಲ್ಲಿ ಕಾಳಿಂಗ ಸರ್ಪ ಅಡ್ಡ ಬಂದಿದರಿಂದ ಚಾಲಕ ಆತಂಕಗೊಂಡು ಒಮ್ಮೆಲೇ ಬ್ರೇಕ್ ಹಾಕಿದ್ದು ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲಿಯೇ ಲಾರಿ ಪಾರ್ಟಿ ಹೊಡೆದ ಘಟನೆ ಶನಿವಾರ ನಡೆದಿದೆ.


ಕಾರ್ಯನಿಮಿತ ಈ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕ ಆರಗ ಜ್ಞಾನೇಂದ್ರ ರವರು ತಮ್ಮ ಕಾರನ್ನು ನಿಲ್ಲಿಸಿ ಸುದೈವಶಾತ್ ಯಾವುದೇ ಪೆಟ್ಟು ಗಾಯ ಆಗದ ಲಾರಿ ಚಾಲಕನನ್ನು ಮಾತನಾಡಿಸಿ ಸಂತೈಸಿ ತೆರಳಿದರು.












