ಇತ್ತೀಚಿನ ಸುದ್ದಿ
ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಂತಕನಿಗೆ ಗಲ್ಲು ಶಿಕ್ಷೆ: ನಾಲ್ವರ ಕೊಂದಾತನಿಗೆ ಮರಣ ದಂಡನೆ
10/12/2025, 18:52
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಲ್ಲಿನ ನ್ಯಾಯಾಲಯ ಎರಡು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ವಿರಾಜಪೇಟೆಯ ಸೆಷನ್ಸ್ ನ್ಯಾಯಾಲಯ ಅತಿ ಶೀಘ್ರದಲ್ಲಿ ಶಿಕ್ಷೆ ಪ್ರಕಟಿಸಿದೆ.
ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022 ಮತ್ತು2024 ರಲ್ಲಿ ನಡೆದ ಪ್ರಕರಣ ಇದಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಭೇದಿಸಿದ ಎರಡು ಪ್ರಕರಣಕ್ಕೆ ಜೀವಾವಧಿ ಹಾಗೂ ಗಲ್ಲು ಶಿಕ್ಷೆ ಪ್ರಕಟಿಸಿದೆ.
2022 ರಲ್ಲಿ ಮಲ್ಲೂರು ಗ್ರಾಮದಲ್ಲಿ ಪತಿಯಿಂದ ಪತ್ನಿಯ ಕೊಲೆ ಪ್ರಕರಣ ಮತ್ತು 2024ರಲ್ಲಿ ಬೇಗೂರಿನಲ್ಲಿ ನಾಲ್ವರನ್ನು ಮನೆಯಲ್ಲಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ, ಪ್ರತ್ಯೇಕ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು, ಜೇನುಕುರುಬರ ರಾಜು ( 60) ಜೇವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಲಾಗಿದೆ. ಈತ ಕುಂಬಾರಕಟ್ಟೆ ನಿಟ್ಟಿರು ಗ್ರಾಮದವನಾಗಿದ್ದಾನೆ. ಮತ್ತೊಂದು ನಾಲ್ವರ ಕೊಲೆ ಪ್ರಕರಣದಲ್ಲಿ ಬೇಗೂರು ಗ್ರಾಮದ ಜೇನು ಕುರುಬರ ರವಿ(37) ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.












