ಇತ್ತೀಚಿನ ಸುದ್ದಿ
ರಾಜಸ್ಥಾನದ ಬಿಕಾನೇರ್ ನಲ್ಲಿ ಕರ್ತವ್ಯದಲ್ಲಿದ್ದ ಕಾಫಿನಾಡ ಯೋಧ ಸಾವು
10/12/2025, 14:10
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಾಜಸ್ಥಾನದ ಬಿಕಾನೇರ್ ನಲ್ಲಿ ಸೇವೆನಿರತ ಕಾಫಿನಾಡ ಯೋಧ ಸಾವನ್ನಪ್ಪಿದ್ದಾರೆ.
ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ಯೋಧ ಕಡೂರಿನ ಗಿರೀಶ್ (37) ಆಗಿದ್ದಾರೆ. ಗಿರೀಶ್ ಅವರು ಗಡಿ ಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕ. ಕಡೂರು ತಾಲೂಕಿನ ಜೋಡಿ ತಿಮ್ಮಾಪುರದವರು. ವಾಂತಿಯಾದ ಕಾರಣ ವಿಶ್ರಾಂತಿಗೆ ಗಿರೀಶ್ ತೆರಳಿದ್ದರು.

ಮನೆಯವರಿಗೆ ವಿಡಿಯೋ ಕಾಲ್ ಮಾಡಿ ಚೆನ್ನಾಗಿದ್ದೇನೆ, ನಾಳೆ ಆಸ್ಪತ್ರೆಗೆ ಹೋಗ್ತೀನಿ ಎಂದಿದ್ದರು. ನಿನ್ನೆ ಗಿರೀಶ್ ಸಾವನ್ನಪ್ಪಿರುವ ಬಗ್ಗೆ ಕುಟುಂಬಸ್ಥರಿಗೆ ಸೇನೆ ಮಾಹಿತಿ ನೀಡಿದೆ. ಯೋಧ ಗಿರೀಶ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.15 ದಿನಗಳ ಹಿಂದಷ್ಟೆ ಊರಿಂದ ಸೇನೆಗೆ ತೆರಳಿದ್ದರು. ಕಳೆದ 18 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.












