ಇತ್ತೀಚಿನ ಸುದ್ದಿ
ಎರಡು ಗುಂಪುಗಳ ನಡುವೆ ಮಾರಾಮಾರಿ: ಕಾಂಗ್ರೆಸ್ ಗ್ರಾಪಂ ಸದಸ್ಯನ ಬರ್ಬರ ಹತ್ಯೆ
06/12/2025, 08:45
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ಚರ ಮಠದ ಬಳಿ
ಕಾಂಗ್ರೆಸ್ ಗ್ರಾಪಂ ಸದಸ್ಯನ ಬರ್ಬರ ಹತ್ಯೆ ಮಾಡಲಾಗಿದೆ.
ಗಣೇಶ್ (38) ಮೃತ ದುರ್ದೈವಿಯಾಗಿದ್ದಾರೆ.
ಮಚ್ಚಿನಿಂದ ಯುವಕರ ಗುಂಪೊಂದು ಈ ಕೃತ್ಯ ಎಸಗಿದೆ. ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಕಾಂಗ್ರೆಸ್ ಗ್ರಾಪಂ ಸದಸ್ಯ ಸಾವು ಕಂಡಿದ್ದಾರೆ.ಗಣೇಶ್ ಅವರುಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.ಸಖರಾಯಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ರಾತ್ರಿ 10.30ರ ವೇಳೆಗೆ ಸಖರಾಯಪಟ್ಟಣದಲ್ಲಿ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಕೊಲೆಗೂ ಮುನ್ನ ಸಖರಾಯಪಟ್ಟಣ ಬಾರ್ ಬಳಿ ಗಲಾಟೆಯಾಗಿತ್ತು. ಬಾರ್ ಬಳಿ ಗಲಾಟೆಯಾದ ಅರ್ಧ ಗಂಟೆ ಬಳಿಕ ಮಠದ ಬಳಿ ಗಲಾಟೆಯಾಗಿ ಕೊಲೆ ನಡೆದಿದೆ.




ಎದುರಾಳಿ ಗುಂಪಿನ ಇಬ್ಬರ ತಲೆಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.











